ಮೆಕ್ ಡೋನಾಲ್ಡ್ಸ್ ಯಾರಿಗೆ ಗೊತ್ತಿಲ್ಲ….? ಅಲ್ಲಿನ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿಡಲು ವಿವಿಧ ಪ್ರಯತ್ನ ಕಂಪನಿ ಕಡೆಯಿಂದ ನಡೆಯುತ್ತಿರುತ್ತದೆ.
ಇದೀಗ ಅಮೆರಿಕಾದ್ಯಾಂತ ಮೆಕ್ ಡೋನಾಲ್ಡ್ಸ್ ರೆಸ್ಟೋರೆಂಟ್ ಗಳಲ್ಲಿ ಐಸ್ ಕ್ರೀಮ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪತ್ತೆ ಹಚ್ಚಲು ಒಂದು ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ.
ಈ ಸಾಫ್ಟ್‌ವೇರ್ ಮೂಲಕ ಯಂತ್ರದ ಕಾರ್ಯನಿರ್ವಹಣೆ ಪತ್ತೆಹಚ್ಚಲು ಪ್ರತಿ 30 ನಿಮಿಷಕ್ಕೆ ಮೆಕ್ ಸುಂಡೈ (ಐಸ್ಕ್ರೀಂ) ಅನ್ನು ಖರೀದಿಸುವ ಬೋಟ್ (ಆಟೋಮೇಟೆಡ್ ಸಾಫ್ಟ್‌ವೇರ್) ಅನ್ನು ರಚಿಸಲಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ರಶೀಕ್ ಜಾಹಿದ್ ಅವರು ಬರ್ಲಿನ್‌ನ ಮೆಕ್‌ನಿಂದ ಮೆಕ್ ಸುಂಡೈ ಖರೀದಿಸಲು ಹೋದಾಗ ಯಂತ್ರವು ಬಳಕೆ ಯೋಗ್ಯವೇ ಎಂಬುದನ್ನು ಕಂಡು ಹಿಡಿಯಲು ಬೋಟ್ ರಚಿಸಲು ಪ್ರೇರೇಪಣೆಗೊಂಡರು. ಹೀಗೆ ಮೆಕ್‌ಬ್ರೋಕನ್ ಸೃಷ್ಟಿಯಾಗಿದೆ
ಮೆಕ್‌ಬ್ರೋಕನ್ ಒಂದು ವೆಬ್‌ಸೈಟ್ ಆಗಿದ್ದು, ಬೋಟ್ ಮೆಕ್ ಡೋನಾಲ್ಡ್ಸ್ ಆ್ಯಪ್ ಮೂಲಕ ಪ್ರತಿ ಅರ್ಧಗಂಟೆಗೆ ಪ್ರತಿ ರೆಸ್ಟೋರೆಂಟ್‌ನಲ್ಲಿ ಮೆಕ್‌ಸುಂಡೆಗೆ ಆದೇಶವನ್ನು ನೀಡುತ್ತದೆ. 13.83 ಲಕ್ಷ ಮೌಲ್ಯದ ಆದೇಶ ನೀಡಲಿದ್ದು, ಐಸ್ ಕ್ರೀಂ ವ್ಯರ್ಥವಾಗಲ್ಲ ಎನ್ನಲಾಗಿದೆ.
ಈ ಅಪ್ಲಿಕೇಶನ್‌ನಿಂದ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಲು ಸಾಧ್ಯವಿಲ್ಲ. ಹತ್ತಿರವಿರುವ ಔಟ್ ಲೆಟ್‌ನಿಂದ ಪಡೆದುಕೊಳ್ಳಬಹುದೇ ಎಂದು ಪರಿಶೀಲಿಸಲು ಮಾತ್ರ ಮ್ಯಾಕ್ ಬ್ರೋಕನ್ ಅನುಮತಿಸುತ್ತದೆ.