ಸೌರ ಮಂಡಲದ ಗ್ರಹಗಳಲ್ಲಿ ಒಂದಾದ ನೆಪ್ಚೂನ್ ಬಳಿ ಭಾರೀ ಬಿರುಗಾಳಿ ಕಂಡು ಬಂದಿದ್ದು, ಅದೀಗ ತನ್ನ ಪಥವನ್ನು ಬದಲಿಸಿದೆ ಎಂದು ಹಬಲ್ ಟೆಲಿಸ್ಕೋಪ್‌ನಲ್ಲಿ ಕಂಡು ಬಂದಿದೆ.
ಅಟ್ಲಾಂಟಿಕ್ ಸಾಗರಕ್ಕಿಂತ ವಿಸ್ತಾರವಾದ ಈ ಬಿರುಗಾಳಿಯ ಕುರಿತಂತೆ ನಾಸಾ ಹಾಗೂ ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿ ವಿವರಿಸಿವೆ. ಈ ಬಿರುಗಾಳಿಯು 4,600 ಮೈಲಿಯಷ್ಟು ವಿಸ್ತಾರವಾಗಿದ್ದು ನಾಸಾದ ಹಬಲ್ ದೂರದರ್ಶಕದ ಕಣ್ಣಿಗೆ 2018ರಲ್ಲಿ ಮೊದಲ ಬಾರಿಗೆ ಕಣ್ಣಿಗೆ ಬಿದ್ದಿತ್ತು. ದಕ್ಷಿಣಾಭಿಮುಖವಾಗಿ ಚಲಿಸುತ್ತಿದ್ದ ಈ ಬಿರುಗಾಳಿಯು ಇದ್ದಕ್ಕಿದ್ದಂತೆ ತನ್ನ ದಿಕ್ಕು ಬದಲಿಸಿ ಉತ್ತರಾಭಿಮುಖವಾಗಿ ಚಲಿಸಲು ಆರಂಭಿಸಿದೆ.
ಸೌರಮಂಡಲದ ಹೊರ ವರ್ತುಲದಲ್ಲಿರುವ ಗ್ರಹಗಳಲ್ಲಿ ನಡೆಯುವ ವಿದ್ಯಮಾನಗಳನ್ನು ವೀಕ್ಷಿಸಲು ಹಬಲ್ ದೂರದರ್ಶಕ ನೆರವಾಗುತ್ತದೆ.
ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಪೇಜ್‌ನಲ್ಲಿ ನಾಸಾ ಹಬಲ್ ನೆಪ್ಚೂನ್‌ನ ಇತ್ತೀಚಿನ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ಒಂದೂವರೆ ಲಕ್ಷದಷ್ಟು ಲೈಕ್‌ಗಳು ಬಿದ್ದಿವೆ.
https://www.instagram.com/p/CI1MSoZHICf/?utm_source=ig_web_copy_link