ನೋಡನೋಡ್ತಿದ್ದಂತೆ ಸಿಂಕ್ ಹೋಲ್ನಲ್ಲಿ ಬಿತ್ತು ದುಬಾರಿ ಕಾರು..! 28-11-2020 11:50AM IST / No Comments / Posted In: Latest News, International ಸಿಂಕ್ಹೋಲ್ ಒಳಗೆ ಎಸ್ಯುವಿ ಕಾರು ಬಿದ್ದ ಘಟನೆ ನ್ಯೂಯಾರ್ಕ್ ಸಿಟಿಯಲ್ಲಿ ನಡೆದಿದೆ. ಕೇಸರಿ ಬಣ್ಣದ ಟೊಯೋಟೋ ಆರ್ಎವಿ 4 ಕಾರು ಮುಮ್ಮುಖವಾಗಿ ಸಿಂಕ್ಹೋಲ್ ಒಳಕ್ಕೆ ಬಿದ್ದಿದೆ ಅಂತಾ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅದೃಷ್ಟವಶಾತ್ ಕಾರಿನೊಳಕ್ಕೆ ಯಾರೂ ಇಲ್ಲದ ಕಾರಣ ಯಾವುದೇ ಪಾಣಾಪಾಯ ಸಂಭವಿಸಿಲ್ಲ. ಈ ಅಪಘಾತದಿಂದ ಪಾರಾದ ನಾನೇ ಅದೃಷ್ಟವಂತ ಅಂತಾ ಕಾರು ಮಾಲೀಕ ಥುಪ್ಟನ್ ಟೋಪ್ಜಿ ಹೇಳಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಕಾರನ್ನ ಸಿಂಕ್ಹೋಲ್ನಿಂದ ತೆಗೆದಿದ್ದಾರೆ. ಟ್ವಿಟರ್ನಲ್ಲಿ ಕಾರು ಅಪಘಾತದ ಫೋಟೋಗಳು ವ್ಯಾಪಕಾಗಿ ಹರಿದಾಡುತ್ತಿವೆ. Community Advisory: I have been informed of an unoccupied vehicle that fell into a large sinkhole in #Maspeth. (1/3) pic.twitter.com/befhoLtlvY — Robert Holden (@BobHoldenNYC) November 26, 2020