ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ.
ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ ಶಾರ್ಕ್‌ಗಳನ್ನು ಶೋಧಿಸಿದ್ದಾರೆ. ಇವುಗಳಲ್ಲಿ ಒಂದು ಜಗತ್ತಿನ ಅತಿ ದೊಡ್ಡ ಕಶೇರುಕವೆಂದು ತಿಳಿದು ಬಂದಿದೆ.
ಕಿಟ್‌ಫಿನ್ ಶಾರ್ಕ್ ಎಂಬ ಈ ಕಪ್ಪು ಹೊಟ್ಟೆಯ ಲ್ಯಾಂಟರ್ನ್ ಶಾರ್ಕ್ ಜೊತೆಯಲ್ಲಿ ಸದರ್ನ್ ಲ್ಯಾಂಟರ್ನ್ ಶಾರ್ಕ್ ಎಂಬ ಈ ಜೀವಿಗಳು ಜನವರಿಯಲ್ಲಿ ನ್ಯೂಜಿಲೆಂಡ್‌ನ ಪೂರ್ವ ಕರಾವಳಿಯ ಚಟ್ಹಾಮ್ ರೈಸ್‌ನಲ್ಲಿ ಕಂಡು ಬಂದಿವೆ. ಇವುಗಳ ಪೈಕಿ ಕಿಟ್‌ಫಿನ್ ಶಾರ್ಕ್‌ಗಳು 180 ಸೆಂ.ಮೀ. ಉದ್ದ ಬೆಳಯಬಹುದಾಗಿದ್ದು, ’ಜೈಂಟ್ ಲುಮಿನಸ್ ಶಾರ್ಕ್’ ಎಂದು ಬೆಲ್ಜಿಯಂ ಹಾಗೂ ನ್ಯೂಜಿಲೆಂಡ್‌ನ ವಿಜ್ಞಾನಿಗಳ ತಂಡ ಹೆಸರಿಟ್ಟಿದೆ.
ಗ್ರಾಹಕರನ್ನು ಸೆಳೆಯಲು ಸಲೂನ್ ಮಾಲೀಕನ ಭರ್ಜರಿ ಐಡಿಯಾ, ಚಿನ್ನದ ರೇಜರ್ ನಲ್ಲಿ ಶೇವಿಂಗ್
ಬಯೋಲುಮಿನಿಸೆನ್ಸ್ ಎಂಬ ಜೈವಿಕ ಕ್ರಿಯೆಯ ಕಾರಣದಿಂದ ಶಾರ್ಕ್ ಕತ್ತಲಲ್ಲಿ ಹೊಳೆಯುತ್ತದೆ. ಜಲಚರಗಳ ಪೈಕಿ ಇದೊಂದು ಅತ್ಯಂತ ವಿಸ್ತಾರವಾಗಿ ಹಬ್ಬಿರುವ ಸಂಗತಿಯಾದರೂ ಸಹ ಇದೇ ಮೊದಲ ಬಾರಿಗೆ ಶಾರ್ಕ್‌ಗಳ ವಿಷಯದಲ್ಲಿ ಡಾಕ್ಯುಮೆಂಟ್ ಮಾಡಲಾಗಿದೆ.
ಬೆಲ್ಜಿಯಂನ ಕ್ಯಾಥೋಲಿಕ್ ಡೆ ಲೌವೈನ್ ಹಾಗೂ ನ್ಯೂಜಿಲೆಂಡ್‌ನ ರಾಷ್ಟ್ರೀಯ ಜಲ ಹಾಗೂ ವಾತಾವರಣ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳ ಜಂಟಿ ತಂಡವೊಂದು ಆಳ ಸಾಗರದ ಜೀವವೈವಿಧ್ಯದ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ಸಂಗತಿಗಳು ತಿಳಿದು ಬಂದಿವೆ.