alex Certify ಬೆಚ್ಚಿಬೀಳಿಸುವಂತಿದೆ ಬೈರೂತ್‌ ನಲ್ಲಿ ಸಂಭವಿಸಿರುವ ಭೀಕರ ಸ್ಪೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಬೈರೂತ್‌ ನಲ್ಲಿ ಸಂಭವಿಸಿರುವ ಭೀಕರ ಸ್ಪೋಟ

ಲೆಬನಾನ್‌ ರಾಜಧಾನಿ ಬೈರೂತ್‌ ನಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಇದರ ದೃಶ್ಯಾವಳಿ ಬೆಚ್ಚಿಬೀಳಿಸುವಂತಿದೆ. ಈ ಘಟನೆಯಲ್ಲಿ 70 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರದಂದು ಈ ಸ್ಪೋಟ ಸಂಭವಿಸಿದ್ದು, ಇದರ ಶಬ್ದ 200 ಕಿಲೋ ಮೀಟರ್‌ ವ್ಯಾಪ್ತಿವರೆಗೆ ಕೇಳಿಸಿದೆ. ಈಗಾಗಲೇ ಕೊರೊನಾ, ಆರ್ಥಿಕತೆಯಿಂದ ತತ್ತರಿಸಿಹೋಗಿರುವ ಲೆಬನಾನ್‌ ಗೆ ಈ ಸ್ಫೋಟ ಮತ್ತೊಂದು ಆಘಾತ ತಂದೊಡ್ಡಿದೆ.

ಗಾಯಗೊಂಡಿರುವ ಬಹಳಷ್ಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದ್ದು, ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಸ್ಪೋಟದ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲವಾಗಿದ್ದು, ಸರ್ಕಾರ ತನಿಖೆಗೆ ಮುಂದಾಗಿದೆ.

https://www.facebook.com/ABC10News/videos/3313501755385795

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...