ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್ ಫಿಶ್‌ನ ಫೋಟೋ ವೈರಲ್ ಆಗಿದೆ.
ಹೌದು, ವಿಕ್ಟೋರಿಯಾದ ಕೆನ್ನೆಟ್ ಸಮುದ್ರದ ತಟದಲ್ಲಿ ಸುಮಾರು ಎರಡು ಅಡಿ ಉದ್ದದ ಸನ್ ಫಿಶ್ ಬಿದ್ದಿದೆ. ಇದನ್ನು ಗಮನಿಸಿದ ಪ್ರವಾಸಿಗರು ಹಾಗೂ ಸ್ಥಳೀಯರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಅದನ್ನು ನೋಡಿ ಮೀನು ಎಂದು ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತಜ್ಞರ ಪ್ರಕಾರ ಸನ್‌ಫಿಶ್ ಭೂಮಿ ಮೇಲಿರುವ ಭಾರಿ ತೂಕದ ಮೂಳೆಯಿರುವ ಮೀನು ಎಂದು ಹೇಳಲಾಗಿದೆ. ಪೂರ್ಣ ಪ್ರಮಾಣದಲ್ಲಿ ಬೆಳೆದ ಬಳಿಕ ಈ ಮೀನು 247-1000 ಕೆಜಿ ತನಕ ತೂಗುತ್ತದೆ ಎಂದು ಹೇಳಲಾಗಿದೆ. ಸಣ್ಣ ಮೀನು, ಮೀನಿನ ಲಾರ್ವ ಇವುಗಳ ಆಹಾರವಾಗಿದೆ. ಈ ಮೀನು ಒಂದೇ ಸಮಯಕ್ಕೆ 30 ಕೋಟಿ ಮೊಟ್ಟೆಗಳನ್ನು ಇಡುತ್ತವೆ ಎನ್ನಲಾಗಿದೆ.
https://www.instagram.com/p/CDDighNhhgW/?utm_source=ig_embed