alex Certify ಹಾರದ ಜೊತೆಗೆ ಪರಸ್ಪರ ಮಾಸ್ಕ್ ಕಟ್ಟಿಕೊಂಡ ವಧು – ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರದ ಜೊತೆಗೆ ಪರಸ್ಪರ ಮಾಸ್ಕ್ ಕಟ್ಟಿಕೊಂಡ ವಧು – ವರ

ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್ ಧರಿಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ವಿವಾಹ ಸಮಾರಂಭದಲ್ಲಿ ವಧು-ವರರು ಪರಸ್ಪರ ಹಾರ ಹಾಕಿಕೊಳ್ಳುವಂತೆಯೇ ಮಾಸ್ಕನ್ನು ಪರಸ್ಪರ ಹಾಕುವ ಹೊಸ ಸಂಪ್ರದಾಯ ಬೆಳೆದರೂ ಅಚ್ಚರಿಯಿಲ್ಲ.

ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಇತ್ತೀಚೆಗೆ ನಡೆದ ವಿವಾಹ ಸಮಾರಂಭದಲ್ಲಿ ವಧು ವರನಿಗೆ, ವರನು ವಧುವಿಗೆ ಮಾಸ್ಕ್ ತೊಡಿಸುವ ಮತ್ತು ಈ ಘಳಿಗೆಯನ್ನು ಕಂಡ ಕುಟುಂಬದವರು ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಹೊಸ ಕೊರೋನಾ ಆಚರಣೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಮಾಸ್ಕ್ ಪೆಹೆನಾಯಿ…..ಎಂದೂ ವರ್ಣಿಸಿದ್ದಾರೆ.

ಈ ಮಾಸ್ಕ್ ಧರಿಸುವ ವಿಡಿಯೋ ನೇಪಾಳದ ವಿವಾಹ ಕಾರ್ಯಕ್ರಮ ಎಂದು ಕೆಲವರು ಗುರುತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...