alex Certify ಕೊರೊನಾ ಕಾಲದ ಕಣ್ಣೀರ ಕಥೆ: ಕೊನೆಗಾಲದಲ್ಲೂ ಒಂದಾದ ವೃದ್ಧ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದ ಕಣ್ಣೀರ ಕಥೆ: ಕೊನೆಗಾಲದಲ್ಲೂ ಒಂದಾದ ವೃದ್ಧ ದಂಪತಿ

ಕೊರೊನಾ ಸೋಂಕು ಇಡೀ ವಿಶ್ವವನ್ನು ಯಾವ ಮಟ್ಟಿಗೆ ಬಾಧಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅದರಲ್ಲೂ ಸೋಂಕಿತರ ಸಂಕಷ್ಟ ಯಾವ ಶತ್ರುವಿಗೂ ಬೇಡ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಮನುಷ್ಯತ್ವ ಜಾಗೃತವಾಗಿದೆ. ಕೊರೊನಾದಿಂದ ಎಲ್ಲೇ ಏನೇ ಅದರೂ ಕುಳಿತಲ್ಲೇ ಹೆದರುವಂತಾಗಿದೆ, ಆ ಸ್ಥಿತಿ ನಮಗೆ ಬಾರದಿರಲಿ ಎಂಬ ಬೇಡಿಕೆಯೊಂದೇ ಗಟ್ಟಿಯಾಗುತ್ತಿದೆ.

ಇತ್ತೀಚೆಗೆ ಚೀನಾದ ಆಸ್ಪತ್ರೆಯಲ್ಲಿ ವೃದ್ಧ ದಂಪತಿ ಐಸಿಯುನಲ್ಲಿ ಇದ್ದವರಿಗೆ ಗುಡ್ ಬೈ ಹೇಳಿ ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತಲ್ಲದೆ, ಎಲ್ಲರಲ್ಲೂ ಕಣ್ಣೀರು ತರಿಸಿತ್ತು.

ಇದೀಗ ಟೆಕ್ಸಾಸ್ ನ ಆಸ್ಪತ್ರೆಯೊಂದರಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. 53 ವರ್ಷದ ತಮ್ಮ ದಾಂಪತ್ಯವನ್ನು ಈ ರೀತಿಯಲ್ಲಿ ಪೂರ್ಣಗೊಳಿಸಿದ್ದಾರೆ.

ಜೂ.9 ರಂದು ಪತ್ನಿ ಬೆಟ್ಟಿ ಟ್ರಾಪ್ಲೆಸ್ (80) ಕೊರೋನಾದಿಂದಾಗಿ ಟೆಕ್ಸಾಸ್ ನ ಹ್ಯಾರಿಸ್ ಮೆಥೊಡಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿಯ ಸೇವೆಯಲ್ಲಿದ್ದ ಕರ್ಟಿಸ್ ಟ್ರಾಪ್ಲೆ (79) ಗೂ ಸೋಂಕು ಬಂದಿದ್ದರಿಂದ 2 ದಿನದ ಬಳಿಕ ಆಸ್ಪತ್ರೆ ಸೇರಿದರು. ಕೊನೆಗೆ ಸಾವಿನಲ್ಲೂ ಕೈಬಿಡಲಿಲ್ಲ. ಒಂದಾಗಿಯೇ ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...