alex Certify ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ

ಕೊರೊನಾ ವೈರಸ್ ಸಾಂಕ್ರಮಿಕದಿಂದ ಬಳಲುತ್ತಿರುವ ಜಾಗತಿಕ ಸಮುದಾಯಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲುವುದು ಬಹಳ ಕಷ್ಟವಾಗುತ್ತಿದೆ. ಈ ವೇಳೆ, ಹಿರಿಯ ನಾಗರಿಕರಿಗೆ ಬದುಕು ಬಹಳ ಕಷ್ಟವಾಗಿದೆ.

ಇದೇ ವೇಳೆ ಶತಾಯುಷಿಗಳೂ ಸಹ ಕೊರೊನಾದಿಂದ ಚೇತರಿಸಿಕೊಂಡ ಸುದ್ದಿಗಳನ್ನು ನೋಡಿ ಒಂದಷ್ಟು ಆಶಾಭಾವನೆ ಇಟ್ಟುಕೊಂಡಿದ್ದಾರೆ ಜನರು. ಇದೇ ವೇಳೆ, ಜೊತೆಯಾಗಿ ಜೀವನ ಮಾಡಿಕೊಂಡೇ, ಕೊರೊನಾ ವೈರಸ್ ಹಾಗೂ ಕ್ಯಾನ್ಸರ್ ಸಹ ಜೊತೆಜೊತೆಯಾಗಿಯೇ ಸೋಲಿಸಿ ಬಂದಿರುವ ದಂಪತಿಗಳೂ ಸಹ ಸುದ್ದಿಯಲ್ಲಿದ್ದಾರೆ.

ರಾಬರ್ಟ್ ಹಾಗೂ ಜಾನ್ಸೀ ಬೇಕಮ್ ಕಳೆದ 46 ವರ್ಷಗಳಿಂದ ದಾಂಪತ್ಯದಲ್ಲಿದ್ದಾರೆ. ಟೆಕ್ಸಾಸ್‌ನಲ್ಲಿರುವ ಈ ದಂಪತಿ ಈಗ ನೆಟ್‌ನಲ್ಲಿ ಸೆನ್ಸೇಷನ್ ಆಗಿದ್ದಾರೆ. ಇದೇ ಮಾರ್ಚ್‌ನಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದ ಬಳಿಕ ರಾಬರ್ಟ್ ಕ್ವಾರಂಟೈನ್‌ನಲ್ಲಿ ಇದ್ದು ಬಂದಿದ್ದಾರೆ. ಇದಕ್ಕೂ ಮುನ್ನ ಅವರ ಮಡದಿ ಜಾನ್ಸಿ ಓವರಿ ಕ್ಯಾನ್ಸರ್‌ಗೆ ತುತ್ತಾಗಿ, ಕಿಮೋಥೆರಪಿಗೆ ಒಳಗಾಗಿ ಯಶಸ್ವಿಯಾಗಿ ಬಂದಿದ್ದಾರೆ. ಬಳಿಕ ರಾಬರ್ಟ್ ಸಂಪರ್ಕಲ್ಲಿದ್ದ ಜಾನ್ಸಿಗೂ ಸಹ ಕೋವಿಡ್-19 ಸೋಂಕು ತಗುಲಿದ್ದು, ಅವರೂ ಸಹ ಚೇತರಿಕೆ ಕಂಡು ಬಂದಿದ್ದಾರೆ. ಆದರೆ ರೋಗಲಕ್ಷಣಗಳು ಮೃದುವಾಗಿದ್ದ ಕಾರಣ ಅವರೂ ಸಹ ಚೇತರಿಸಿಕೊಂಡಿದ್ದು, ದಂಪತಿಗಳಿಬ್ಬರೂ ಒಟ್ಟಿಗೇ ಮದುವೆ ವಾರ್ಷಿಕೋತ್ಸವ ಮಾಡಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...