
ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್ ಕೂಡ ಹೊರತಲ್ಲ.
ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು ಜುಕರ್‌ಬರ್ಗ್ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರಶ್ನೆ ಹಾಕಿದ್ದರು.
ಬಳಿಕ ಅವರೇ ಅದಕ್ಕೆ ಉತ್ತರಿಸಿ, ಈ ರೀತಿ ನಡೆಯುತ್ತಲೇ ಇರುತ್ತದೆ. ಊಟ ಮರೆತದ್ದರಿಂದ ನಾನು ಕಳೆದ ತಿಂಗಳಲ್ಲಿ 10 ಪೌಂಡ್ ತೂಕ ಕಳೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ, ಆದರೆ ನಮ್ಮ ಹೊಸ ಪ್ರಾಡಕ್ಟ್‌ಗಳು ಸಿದ್ಧವಾಗುತ್ತಿವೆ ಎಂದು ಊಟ ಮರೆತ ಹಿನ್ನೆಲೆ ಬಹಿರಂಗಪಡಿಸಿದ್ದಾರೆ ಮತ್ತು ಕೊನೆಯಲ್ಲಿ ತಮ್ಮ ಪ್ರಾಡಕ್ಟ್ ‘(fire)’ ಆಗಿರಲಿವೆ ಎಂದು ಮಹತ್ವದ ಸುಳಿವು ನೀಡಿದ್ದಾರೆ.
ಈ ನಡುವೆ ಅವರ ತಂದೆ ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ, ನಿಮಗೆ ಊಟ ತಲುಪಿಸಲು ಅಮ್ಮ ಮತ್ತು ನಾನು ಬೇಕೇ…? ಎಂದು ಮುದದಿಂದ ಕೇಳಿರುವುದು ನೆಟ್ಟಿಗರ ಮನ ಗೆದ್ದಿದೆ.
ಈ ತಂದೆ- ಮಗನ ಸೋಷಿಯಲ್ ಮೀಡಿಯಾ ಚರ್ಚೆ ನೆಟ್ಟಿಗರ ಮನಗೆದ್ದಿದೆ. ಫೇಸ್ಬುಕ್ ಸಿಇಒ ತನ್ನ ತಂದೆಯೊಂದಿಗೆ ಉಲ್ಲಾಸದ ಚರ್ಚೆ ವೈರಲ್ ಆಗಿದೆ.
ಈ ಪೋಸ್ಟನ್ನು 6 ಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರು ಇಷ್ಟಪಟ್ಟಿದ್ದಾರೆ ಮತ್ತು 2 ಲಕ್ಷಕ್ಕೂ ಹೆಚ್ಚು ಜನರು ಇದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.