ಕೊರೊನಾ ವೈರಸ್ ವಿಶ್ವಕ್ಕೆ ಎಂಟ್ರಿ ಕೊಟ್ಟು ವರ್ಷವೇ ಕಳೆದಿದ್ದು ಜನರು ಇನ್ನೂ ಸಾಮಾನ್ಯ ಜೀವನಕ್ಕೆ ಮರಳಲಾಗದೇ ಸಾವು ನೋವುಗಳಿಂದ ಕಂಗೆಟ್ಟಿದ್ದಾರೆ.
ಕೆಲವೊಂದು ಪ್ರದೇಶಗಳಲ್ಲಿ ಜನರನ್ನ ಕೊರೊನಾದಿಂದ ಕಾಪಾಡೋಕೆ ಲಾಕ್ಡೌನ್ ವ್ಯವಸ್ಥೆ ಇನ್ನೂ ಮುಂದುವರಿದಿದೆ. ಕ್ವಾರಂಟೈನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇದ್ಯಾವುದೂ ಜನರನ್ನ ಬಿಟ್ಟಿಲ್ಲ.
ಕೊರೊನಾದಿಂದಾಗಿ ಜನರು ಹೆಚ್ಚಿನ ಸಮಯವನ್ನ ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಬ್ರಿಟನ್ನಲ್ಲಂತೂ ಮಿಕ್ಕೆಲ್ಲಾ ರಾಷ್ಟ್ರಗಳಿಗಿಂತ ಹೆಚ್ಚಿನ ಅವಧಿಗೆ ಲಾಕ್ಡೌನ್ ಮುಂದುವರಿಸಲಾಗಿದೆ.
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರೋದ್ರಿಂದ ಬ್ರಿಟನ್ ಮಂದಿ ಆರಾಮದಾಯಕ ಎನಿಸುವ ಚಪ್ಪಲಿಗಳನ್ನ ಮನೆಯಲ್ಲಿ ಹಾಕಿಕೊಂಡಿರ್ತಾರೆ. ಆದರೆ ಈ ಆರಾಮದಾಯಕ ಎಂಬ ಹೆಸರನ್ನ ಹೊಂದಿರುವ ಚಪ್ಪಲಿಗಳೇ ಆರೋಗ್ಯಕ್ಕೆ ಹಾನಿ ತಂದೊಡ್ಡುತ್ತಿವೆ. ಇದರಿಂದಾಗಿ ಅನೇಕರು ಲಾಕ್ಡೌನ್ ಪಾದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದು ಯುದ್ಧದ ಸಮಯ; ಎಲ್ಲರಿಗೂ ಬೆಡ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ; ಕೋವಿಡ್ ಸಂದಿಗ್ಧ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವರ ಕಳವಳ
ಈ ಸಮಸ್ಯೆ ಕೇವಲ ಬ್ರಿಟನ್ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ಕಂಡು ಬಂದಿದೆ. ವರ್ಕ್ ಫ್ರಮ್ ಹೋಂನಿಂದಾಗಿ ಕಚೇರಿ ಕಡೆಗೆ ಮುಖ ಮಾಡದ ಜನರು ಮನೆಯಲ್ಲಿ ಪೈಜಾಮಾ ಹಾಗೂ ಆರಾಮದಾಯಕ ಚಪ್ಪಲಿಗಳನ್ನ ಹಾಕಿಕೊಂಡೇ ದಿನವಿಡೀ ಕಚೇರಿ ಕೆಲಸ ಮಾಡುತ್ತಾರೆ.
ಆದರೆ ಅತಿಯಾದ ಆರಾಮ ಜೀವನ ಇದೀಗ ಜನರ ಆರೋಗ್ಯಕ್ಕೆ ಕುತ್ತು ತರ್ತಿದೆ. ಅನೇಕರಿಗೆ ಪಾದದಲ್ಲಿ ನೋವು ಬರಲು ಶುರುವಾಗಿದೆ. ನಿಮಗೂ ಕೂಡ ಪಾದದಲ್ಲಿ ನೋವು ಕಾಣಿಸಿಕೊಳ್ತಿದೆ ಅಂದರೆ ನೀವೂ ಸಹ ಲಾಕ್ಡೌನ್ ಪಾದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದರ್ಥ.
ಪೊಡಿಯಾಟ್ರಿ ಕಾಲೇಜು ನಡೆಸಿರುವ ಅಧ್ಯಯನ ಪ್ರಕಾರ ಈ ಹಿಮ್ಮಡಿ ನೋವು ಉಂಟಾಗಲು ಮುಖ್ಯ ಕಾರಣ ಗುಣಮಟ್ಟದ ಪಾದರಕ್ಷೆಗಳೇ ಆಗಿವೆ.
ನಿಮ್ಮ ಪಾದಕ್ಕೆ ಯಾವುದೇ ಬೆಂಬಲ ಸಿಗುತ್ತಿಲ್ಲ ಅಂದಾಗ ನಿಮಗೆ ನೋವು ಕಾಣಿಸಿಕೊಳ್ಳೋಕೆ ಶುರುವಾಗುತ್ತೆ. ಸರಿಯಾಗಿ ವಿನ್ಯಾಸಗೊಳಿಸದ ಪಾದರಕ್ಷೆಗಳು ಇಂತಹ ಸಮಸ್ಯೆಗಳನ್ನ ತಂದೊಡ್ಡುತ್ತಿವೆ ಎನ್ನಲಾಗಿದೆ.