ಮಾಂಟ್ರಿಯಲ್: ವಿಮಾನದಲ್ಲಿ ಸಂಚರಿಸುವಾಗ ಕಿಟಕಿ ಗಾಜು ಬಿರುಕು ಬಿಟ್ಟಿದ್ದನ್ನು ನೋಡಿ ಪ್ರಯಾಣಿಕನೊಬ್ಬ ಗಾಬರಿಗೊಂಡ ಘಟನೆ ಕೆನಡಾದಲ್ಲಿ ನಡೆದಿದೆ.
ಕಾರಲ್ ಹೆಡೆಡ್ ಎಂಬ 20 ವರ್ಷದ ಯುವಕ ಕೆನಡಾ ಏರ್ ವೇಸ್ ನಲ್ಲಿ ಟೊರಾಂಟೋದಿಂದ ಮಾಂಟ್ರಿಯಲ್ ಗೆ ಹೊರಟಿದ್ದ. ಪ್ರಯಾಣವಾಗಿದ್ದರಿಂದ ಮಲಗಿ ನಿದ್ರಿಸಿದ್ದ. ಎಚ್ಚರಾದಾಗ ಕಿಟಕಿ ನೋಡಿ ಬೆಚ್ಚಿ ಬಿದ್ದಿದ್ದ. ಕಿಟಕಿಯಲ್ಲಿ ದೊಡ್ಡ ಬಿರುಕು ಇತ್ತು.
“ಒಮ್ಮೆ ಕಿಟಕಿ ನೋಡಿ ಕೆಲ ಕಾಲ ನನ್ನ ಹೃದಯ ಸ್ತಂಭನವೇ ನಿಂತಂತಾಯಿತು” ಎಂದು ಹೆಡೆಡ್ ಹೇಳಿದ್ದಾರೆ. ವಿಮಾನದ ಅಟೆಂಡರ್ ಕರೆದು ಆತ ವಿಷಯ ತಿಳಿಸಿದ್ದ. ಅಷ್ಟೇ ಅಲ್ಲ, ಕ್ಯಾಪ್ಟನ್ ಅವರನ್ನೂ ಕರೆದಿದ್ದ.
ಕ್ಯಾಪ್ಟನ್ ಆಗಮಿಸಿ “ಏನೂ ಆಗದು. ಪ್ರಯಾಣಿಕರು ಧೈರ್ಯಗೆಡುವುದು ಬೇಡ. ಇನ್ನು ಕೆಲವೇ ಹೊತ್ತಿನಲ್ಲಿ ನಾವು ಮಾಂಟ್ರಿಯಲ್ ನಲ್ಲಿ ಇಳಿಯಲಿದ್ದೇವೆ” ಎಂದು ಹೇಳಿದ್ದರು.