ಕೋವಿಡ್-19 ಸಂಕಷ್ಟದ ಕಾರಣದಿಂದ ಮಾಸ್ಕ್ ಧರಿಸುವುದು ಎಲ್ಲೆಡೆ ಕಡ್ಡಾಯವಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ ಯೋಧರೊಬ್ಬರ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅಮೆರಿಕದಿಂದ ಪೋರ್ಟೋರಿಕೋದ ಸ್ಯಾನ್ ಜುವಾನ್ಗೆ ವಿಮಾನದಲ್ಲಿ ಬಂದಿಳಿದ ಈ ವ್ಯಕ್ತಿಗೆ ವಿಮಾನ ನಿಲ್ದಾಣದ ಭದ್ರತಾ ಪಡೆಯ ಯೋಧರೊಬ್ಬರು ಮಾಸ್ಕ್ ಹಾಕಿಕೊಳ್ಳಲು ಸೂಚಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಪುಂಡ ಪ್ರಯಾಣಿಕ ಪ್ರಯಾಣ ಘೋಷಣಾ ಪ್ರಮಾಣ ಪತ್ರಕ್ಕೆ ಸಹಿ ಹಾಕಲೂ ಸಹ ನಿರಾಕರಿಸಿದ್ದಾನೆ.
ಮದ್ಯದ ಅಮಲಿನಲ್ಲಿದ್ದ ಅಡ್ರಿಯೆನ್ ವಿಲ್ಲಿಯಮ್ ಹೆಸರಿನ ಈತ ಅಧಿಕಾರಿಗಳ ಮೇಲೆ ಕೂಗಾಡುತ್ತಿರುವಂತೆಯೇ ಆತನಿಗೆ ಕೈಕೋಳ ಧರಿಸಿ ಬಂಧಿಸಲಾಗಿದೆ.