ತನಗೆ ತಪ್ಪಾಗಿ ಸಿಕ್ಕ ಸ್ಕ್ರಾಚ್ ಕಾರ್ಡ್ನಿಂದ ಮಿಚಿಗನ್ ವ್ಯಕ್ತಿಯೊಬ್ಬರು ಮಿಲಿಯನ್ ಡಾಲರ್ ಜಾಕ್ಪಾಟ್ ಗೆದ್ದಿದ್ದಾರೆ.
57 ವರ್ಷದ ಈ ವ್ಯಕ್ತಿ ತಮ್ಮ ಮಡದಿಯ ಕಾರಿಗೆ ಗಾಳಿ ತುಂಬಿಸಲು ಪೆಟ್ರೋಲ್ ಸ್ಟೇಷನ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ $10 ಮುಖಬೆಲೆಯ ಲಾಟರಿ ಸ್ಕ್ರಾಚ್ ಕಾರ್ಡ್ ಅನ್ನು ಗಮನಿಸಿದ ಆ ವ್ಯಕ್ತಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಆ ಸ್ಟೇಷನ್ ಕ್ಲರ್ಕ್, ಆತನಿಗೆ ತಪ್ಪಾಗಿ $20ನ ಸ್ಕ್ರಾಚ್ ಕಾರ್ಡ್ ನೀಡಿದ್ದಾರೆ.
ಇದೇ ಸ್ಕ್ರಾಚ್ ಕಾರ್ಡ್ನಿಂದ ಅವರಿಗೆ $2 ಮಿಲಿಯನ್ ಡಾಲರ್ ಲಾಟರಿ ಹೊಡೆದಿದೆ. ತನಗೆ ಸಿಕ್ಕ ಈ ದುಡ್ಡಿನಿಂದ ಕನಸಿನ ಮನೆಯೊಂದನ್ನು ಖರೀದಿ ಮಾಡುವುದಾಗಿ ಹೆಸರು ಹೇಳಲಿಚ್ಛಿಸದ ಈ ವ್ಯಕ್ತಿ ಹೇಳಿಕೊಂಡಿದ್ದಾರೆ.