ವಿಶ್ವ ದಾಖಲೆ ನಿರ್ಮಿಸಲು ಜನರು ಏನೇನೆಲ್ಲಾ ಮಾಡುತ್ತಾರಪ್ಪ ? ಹಳೆ ದಾಖಲೆಗಳನ್ನು ಮುರಿದು, ಹೊಸ ದಾಖಲೆ ಸೃಷ್ಟಿಸುವುದರಲ್ಲೇ ದೊಡ್ಡ ದಾಖಲೆ ಮಾಡಿಬಿಡುತ್ತಾರೆ.
ಒಂದರ ಮೇಲೊಂದರಂತೆ ಕಡಿಮೆ ಸಮಯದಲ್ಲಿ ಮೊಟ್ಟೆಗಳನ್ನು ಜೋಡಿಸುವುದು, ಶೇವಿಂಗ್ ಕ್ರೀಮ್ ನಲ್ಲಿ ಪಿಂಗ್-ಪಾಂಗ್ ಬಾಲ್ ನಿಲ್ಲಿಸುವುದು…..ಹೀಗೆ ಇತ್ತೀಚೆಗೆ ಹಲವು ದಾಖಲೆಗಳನ್ನು ಕಂಡಿದ್ದೇವೆ.
ಇದೀಗ ಟಿ-ಶರ್ಟ್ ನ ಸರದಿ. ಕಡಿಮೆ ಸಮಯದಲ್ಲಿ 260 ಟಿ ಶರ್ಟ್ ಗಳನ್ನು ಧರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇನ್ ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.
ವ್ಯಕ್ತಿಯೊಬ್ಬನನ್ನು ನಿಲ್ಲಿಸಿ ಮಧ್ಯಮ ಗಾತ್ರದಿಂದ ಹಿಡಿದು ಅತಿ ದೊಡ್ಡ ಗಾತ್ರದವರೆಗಿನ ಟಿ ಶರ್ಟ್ ಗಳನ್ನು ತರಾತುರಿಯಲ್ಲಿ ತೊಡಿಸುತ್ತಾ ಹೋಗುತ್ತಾರೆ. ಕೊನೆಯ ಶರ್ಟ್ ಧಾರಣೆ ಆದ ಕೂಡಲೇ ಗಿನ್ನಿಸ್ ರೆಕಾರ್ಡ್ ನ ಪ್ರಮಾಣಪತ್ರವನ್ನು ಕೈಗಿಡುತ್ತಾರೆ.
ವಿಡಿಯೋ ನೋಡಿದರೆ ನಗು ತರಿಸುವಂತಿದೆ. ದಾಖಲೆ ಮಾಡುವುದು ಇಷ್ಟು ಸುಲಭವೇ ಎನಿಸುತ್ತದೆ. ಆದರೆ, ನೋಡಲಷ್ಟೆ ಸುಲಭ. 260 ಟಿ ಶರ್ಟ್ ಗಳನ್ನ ಅಷ್ಟು ಬೇಗ ಧರಿಸುವುದು ಸುಲಭವಲ್ಲ. ಅವುಗಳನ್ನು ಧರಿಸಿದವ ಕಾರ್ಟೂನ್ ನಲ್ಲಿ ಬರುವ ಬೇಮ್ಯಾಕ್ಸ್ ನ ಸೂಪರ್ ಹೀರೋ ಕಂಡಂತೆ ದಢೂತಿ ದೇಹ ಹೊತ್ತವನಂತೆ ಕಾಣುತ್ತಾನೆ.
https://www.instagram.com/reel/CEBh22iBIoN/?utm_source=ig_embed