ರಾತ್ರಿ ನಿದ್ದೆ ಮುಗಿಸಿ ಬೆಳಗ್ಗೆ ಎಂದಿನಂತೆ ಎದ್ದಿದ್ದ ವ್ಯಕ್ತಿಯೊಬ್ಬನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಏನಾಯ್ತು ಅಂತಾ ಆಸ್ಪತ್ರೆಗೆ ಹೋದರೆ ವೈದ್ಯರು ಈತ ನಿದ್ದೆಗಣ್ಣಲ್ಲಿ ಏರ್ಪೋಡ್ ನುಂಗಿದ್ದಾನೆ ಎಂಬ ಆಘಾತಕಾರಿ ಅಂಶವನ್ನ ತಿಳಿಸಿದ್ದಾರೆ.
38 ವರ್ಷದ ಬ್ರ್ಯಾಡ್ ಗೌತಿಯರ್ ಬೆಳಗ್ಗೆ ನಿದ್ದೆಯಿಂದೆದ್ದು ನೀರು ಕುಡಿಯಲು ಮುಂದಾದ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಆದರೂ ಕಷ್ಟಪಟ್ಟು ನೀರು ಕುಡಿದ್ರೂ ಎದೆ ನೋವು ಮಾತ್ರ ಕಡಿಮೆಯಾಗಿರಲಿಲ್ಲ.
ಬಳಿಕ ಅವರ ಏರ್ಪೋಡ್ ಒಂದು ಕಳೆದು ಹೋಗಿರೋದು ಮನೆಯವರ ಗಮನಕ್ಕೆ ಬಂದಿದೆ. ಹೀಗಾಗಿ ಮನೆಯವರೆಲ್ಲ ಸೇರಿ ಬಹುಶಃ ಅದನ್ನ ನೀನೇ ನುಂಗಿದ್ದೀಯಾ ಎಂದು ಬ್ರ್ಯಾಡ್ರನ್ನ ಗೇಲಿ ಮಾಡಿದ್ದಾರೆ.
ಉಸಿರಾಟದ ಸಮಸ್ಯೆ ಹಾಗೂ ಎದೆನೋವು ಹೆಚ್ಚಾಗಿದ್ದರಿಂದ ಬ್ರ್ಯಾಡ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬ್ರ್ಯಾಡ್ರನ್ನ ಪರಿಶೀಲಿಸಿದ ವೈದ್ಯರು ಆಹಾರದಲ್ಲಿ ಏರುಪೇರಾಗಿದೆ ಎಂದು ಹೇಳಿದ್ರು.
ಆದರೆ ಎಕ್ಸ್ ರೇ ರಿಪೋರ್ಟ್ನಲ್ಲಿ ಬ್ರ್ಯಾಡ್ರ ಅನ್ನನಾಳದಲ್ಲಿ ಏರ್ಪೋಡ್ ಸಿಲುಕಿರೋದು ಕಂಡು ಬಂದಿದೆ..!ಅದೃಷ್ಟವಶಾತ್ ಏರ್ಪೋಡ್ ಅಂತಹ ಗಂಭೀರ ಹಾನಿಯನ್ನ ತಂದೊಡ್ಡಿಲ್ಲ.
ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಬ್ರ್ಯಾಡ್ರ ಅನ್ನನಾಳದಲ್ಲಿ ಸಿಲುಕಿದ್ದ ಏರ್ಪೋಡ್ನ್ನು ಹೊರ ತೆಗೆದಿದ್ದಾರೆ. ವಿಚಿತ್ರ ಅಂದರೆ ಆ ಏರ್ಪೋಡ್ ಇನ್ನೂ ತನ್ನ ಕೆಲಸವನ್ನ ಚೆನ್ನಾಗಿಯೇ ನಿರ್ವಹಿಸುತ್ತಿದೆ..!