20 ಅಡಿ ಆಳದಲ್ಲಿ ಸಿಲುಕಿದ್ದ ಕಿವುಡ ನಾಯಿಯನ್ನ ರಕ್ಷಿಸಲು ವ್ಯಕ್ತಿಯೊಬ್ಬರು ಜೆಸಿಬಿಯನ್ನ ಬಳಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಬರೋಬ್ಬರಿ 30 ಗಂಟೆಗಳ ಕಾರ್ಯಾಚರಣೆ ಬಳಿಕ ನಾಯಿಯನ್ನ ರಕ್ಷಣೆ ಮಾಡಲಾಗಿದೆ.
ಯುಕೆ ಮೂಲದ ವ್ಯಕ್ತಿ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಡಿಚ್ಚಿ ಎಂಬ ನಾಯಿ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಕಾಣೆಯಾದ ನಾಯಿ ಹುಡುಕಾಟಕ್ಕಾಗಿ ಮಾಲೀಕ ಸೋಶಿಯಲ್ ಮೀಡಿಯಾದಲ್ಲಿ ಸಹಾಯ ಕೋರಿದ್ದರು. ಕೂಡಲೇ 30ಕ್ಕೂ ಹೆಚ್ಚು ಜನರು ಟಾರ್ಚ್ ಹಿಡಿದು ಹುಡುಕಾಟ ನಡೆಸಿದ್ದಾರೆ.
ಇನ್ನು ನಾಯಿ ತನಗೆ ಸಿಗೋದಿಲ್ಲ ಎಂದು ಮಾಲೀಕ ಡಂಕನ್ ನಿರಾಶರಾಗಿದ್ದರು. ಬೇಸರದಿಂದ ನಾಯಿ ಕಳೆದು ಹೋಗಿದ್ದ ಸ್ಥಳಕ್ಕೇ ವಾಪಸ್ಸಾದ್ರು. ಈ ವೇಳೆ ಅಲ್ಲೊಂದು ಗುಂಡಿಯನ್ನ ಗಮನಿಸಿದರು.
ಕಿವುಡು ಶ್ವಾನ ಇದರಲ್ಲಿ ಸಿಲುಕಿರಬಹುದೆಂದು ಊಹಿಸಿದ ಮಾಲೀಕ ಸಮಯ ವ್ಯರ್ಥ ಮಾಡದೇ ಸ್ನೇಹಿತರ ಸಹಾಯದಿಂದ ಜೆಸಿಬಿ ಬಳಸಿ ಬರೋಬ್ಬರಿ 30 ಗಂಟೆ ಕಾರ್ಯಾಚರಣೆ ನಡೆಸಿ ಕಿವುಡು ನಾಯಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://youtu.be/Hwb4tP9Ftys?t=3