ವ್ಯಕ್ತಿಯೊಬ್ಬ ಆ್ಯಂಬುಲೆನ್ಸ್ ಕಳವು ಮಾಡಲು ಮುಂದಾದ ಘಟನೆಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಂಕಾಷೈರ್ ನ ಬ್ಲ್ಯಾಕ್ ಪೂಲ್ ಎಂಬಲ್ಲಿ ಆ.12 ರಂದು ಘಟನೆ ನಡೆದಿದೆ.
ಹೊಂಡದಲ್ಲಿ ಬಿದ್ದು ಗಾಯಗೊಂಡ ವೃದ್ಧನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಗೆ ಕರೆ ಮಾಡಲಾಗಿತ್ತು.
ಹಳದಿ ಬಣ್ಣದ ಆ್ಯಂಬುಲೆನ್ಸ್ ನ್ನು ರಸ್ತೆ ನಡುವೆ ನಿಲ್ಲಿಸಿ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಅಷ್ಟರಲ್ಲಿ ಬಂದ ವ್ಯಕ್ತಿ ಡ್ರೈವರ್ ಸೀಟ್ ಕಡೆ ಇರುವ ಬಾಗಿಲು ತೆಗೆದು ಅಲ್ಲಿ ಏನೋ ಹುಡುಕಲಾರಂಭಿಸಿದ್ದಲ್ಲದೇ ಆ್ಯಂಬುಲೆನ್ಸ್ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ.
ಆತನ ದುಷ್ಕೃತ್ಯ ತಿಳಿದು ಬಂದ ಇಬ್ಬರು ವೈದ್ಯಕೀಯ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. “ಬ್ಲ್ಯಾಕ್ ಪೂಲ್ ನ 51 ವರ್ಷದ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಕಳ್ಳತನ ಹಾಗೂ ಬಿ ಹಾಗೂ ಸಿ ಕೆಟಗರಿಯ ಔಷಧ ಸೇವಿಸುವ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈಗ ಆತ ಮತ್ತೆ ದಾಂಧಲೆ ಪ್ರಾರಂಭಿಸಿದ್ದಾನೆ” ಎಂದು ಪೊಲೀಸ್ ಇಲಾಖೆ ವಕ್ತಾರರು ಮಾಹಿತಿ ನೀಡಿದ್ದಾರೆ.
ಅಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಜತೆ ಕಿರಿಕ್ ಮಾಡಿದ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಬಂಧಿಸಲಾಗಿದೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
https://www.youtube.com/watch?time_continue=27&v=0tlbrG_rYQY&feature=emb_logo