ಮನುಷ್ಯ ಭೂಮಿಯ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಇಂದು ನಿನ್ನೆಯದಲ್ಲ. ಪ್ರತಿಪ್ರಾಣಿಯ ಮೇಲೆ ಪ್ರಭುತ್ವ ಸಾಧಿಸಲು ಮನುಷ್ಯ ಹಲವು ಬಾರಿ ಪ್ರಯತ್ನಿಸುವುದು ಸಹಜ. ಆದರೆ ಈ ರೀತಿ ಮಾಡಲು ಹೊರಟಾಗ ಹಾವುಗಳು ತಿರುಗಿ ಬೀಳುವಷ್ಟು ಇನ್ಯಾವ ಪ್ರಾಣಿಗಳು ಮಾಡುವುದಿಲ್ಲ ಎನಿಸುತ್ತದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ.
ಹೌದು, ಹಾವುಗಳ ಮೇಲೆ ಮನುಷ್ಯರ ದಾಳಿಯನ್ನು ತಡೆಯಲು ಹಲವು ಬಾರಿ ಪ್ರತಿರೋಧ ತೋರುತ್ತವೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೊ ಬ್ರೆಜಿಲ್‌ನಲ್ಲಿ ತೆಗೆಯಲಾಗಿದೆ. ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಬ್ರೆಜಿಲ್ ಭಾಗದಲ್ಲಿ ಕಾಣಿಸಿಕೊಳ್ಳುವ ಅನಕೊಂಡ ಎನ್ನುವ ಪ್ರಬೇಧ ಹಾವಿನೊಂದಿಗೆ ಚೆಲ್ಲಾಟ ಆಡಲು ಹೋಗಿದ್ದಾರೆ. ಭೂಮಿ ಮೇಲಿರುವ ಅತಿದೊಡ್ಡ ಹಾವಿನ ಪ್ರಬೇಧ ಎಂದು ಹೇಳಲಾಗುವ ಅನಕೊಂಡದ ಬಾಲವನ್ನು ಎಳೆದಿರುವುದು ಇದೀಗ ಭಾರಿ ವೈರಲ್ ಆಗಿದೆ.
ಬೋಟಿನಲ್ಲಿ ತೆರಳುತ್ತಿರುವ ವ್ಯಕ್ತಿ, ನದಿಯಲ್ಲಿ ಹೋಗುತ್ತಿದ್ದ ಅನಕೊಂಡದ ಬಾಲವನ್ನು ಎಳೆದಿದ್ದಾನೆ. ಈತನ ಸ್ಪರ್ಷದಿಂದ ಎಚ್ಚೆತ್ತುಕೊಂಡ ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ವ್ಯಕ್ತಿ ಇನ್ನಷ್ಟು ಬಲವಾಗಿ ಬಾಲವನ್ನು ಎಳೆದಿದ್ದಾನೆ. ಆದರೆ ಹಾವು ತಪ್ಪಿಸಿಕೊಂಡು ನೀರಿನಲ್ಲಿ ಹೋಗಿದೆ. ಆದರೀಗ ವ್ಯಕ್ತಿಯ ಈ ನಡವಳಿಕೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದು, ಈ ರೀತಿ ಹಿಂಸಿಸಬಾರದು ಎಂದಿದ್ದಾರೆ. ಇದೀಗ ಈ ವಿಡಿಯೊವನ್ನು ಐದು ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
https://twitter.com/menlivesless/status/1276545698771562496?ref_src=twsrc%5Etfw%7Ctwcamp%5Etweetembed%7Ctwterm%5E1276545698771562496%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-tries-to-pull-anaconda-out-of-the-water-viral-video-has-terrified-netizens-watch%2F613551