ಕೊರೊನಾ ಸೋಂಕು ಹರಡದಂತೆ ಎಲ್ಲೆಡೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ, ಅನೇಕರು ಮಾಸ್ಕ್ ಧರಿಸುವುದರಿಂದ ಪ್ರಯೋಜನ ಇಲ್ಲ, ಕೊರೊನಾ ಹರಡದಿರಲು ಸಾಧ್ಯವಿಲ್ಲ ಎಂಬಿತ್ಯಾದಿ ವಾದ ಮಂಡಿಸುತ್ತಿದ್ದಾರೆ.
ಗೆಳೆಯರ ನಡುವೆ ನಡೆದ ಇಂತಹುದೇ ಒಂದು ಸಂಭಾಷಣೆಯಿಂದ ಪ್ರೇರಿತನಾದವನೊಬ್ಬ, ಮಾಸ್ಕ್ ಧಾರಣೆಯ ಮಹತ್ವ ತಿಳಿಸಲು ಪ್ರಯೋಗವೊಂದಕ್ಕೆ ಮುಂದಾದ.
ಮಾಸ್ಕ್ ಧರಿಸಿ, ಎಷ್ಟೇ ಗಾಳಿ ಊದಿದರೂ ತನ್ನೆದುರಿಗೆ ಉರಿಯುತ್ತಿದ್ದ ಮೇಣದ ಬತ್ತಿ ಆರುವುದಿಲ್ಲ. ಗಾಳಿಯೇ ಹೊರಬರದಿದ್ದ ಮೇಲೆ ಎಂಜಲು ಹೊರಬರಲು ಹೇಗೆ ಸಾಧ್ಯ ? ಇದರಿಂದ ಕೊರೊನಾ ಸೋಂಕು ಹರಡದಿರಲು ಮಾಸ್ಕ್ ಸಹಕಾರಿ ಎಂಬುದನ್ನು ಸಾಬೀತುಪಡಿಸಿದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಾಸ್ಕ್ ಮಹತ್ವ ತಿಳಿಸುವುದರ ಜೊತೆಗೆ ಅನಾನುಕೂಲ ತಿಳಿಸುವ ಅನೇಕ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.