ಪ್ರತಿಭಟನೆಯಲ್ಲಿ ನಾನಾ ರೂಪ. ಇಲ್ಲೊಬ್ಬ ಮಹಾಶಯ ಪ್ಯಾಂಟ್ ರಹಿತನಾಗಿ ಸೊಂಟಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ತನ್ನ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾನೆ.
ಕೊರೋನ ವೈರಸ್ ಹರಡುವುದನ್ನು ತಡೆಯಲು 17 ದಿನಗಳ ‘ಫೈರ್‌ಬ್ರೇಕ್ ಲಾಕ್‌ಡೌನ್’ ಘೋಷಣೆಯಾದಾಗಿನಿಂದ ಯುಕೆಯ ವೇಲ್ಸ್‌ನ ಸೂಪರ್ ಮಾರ್ಕೆಟ್ ಮತ್ತು ಮಳಿಗೆಗಳು ಬಟ್ಟೆ, ಬೂಟ್ಸ್, ಆಟಿಕೆಗಳು ಮತ್ತು ಹಾಸಿಗೆ ಮುಂತಾದ ಉತ್ಪನ್ನ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಬಟ್ಟೆಯನ್ನು ‘ಅನಿವಾರ್ಯವಲ್ಲ’ ಎಂದು ತೀರ್ಮಾನಿಸಿರುವ ಕ್ರಮ ವಿರೋಧಿಸಿ ಸ್ಟೀಫನ್ ಮ್ಯಾಥ್ಯೂಸ್ ಎಂಬಾತ ಪ್ಯಾಂಟ್ ಕಳಚಿಟ್ಟು ಸೊಂಟದ ಭಾಗಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ಪ್ರತಿಭಟಿಸಿದ್ದಾನೆ.
ಸ್ಟೂಲ್ ಮೇಲೆ ಕೆಲಸ ಮಾಡಲು ನಿಂತಿರುವ ಆತ ಬಾಳೆಹಣ್ಣು ಕಟ್ಟಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಸ್ಥಳೀಯ ಆಡಳಿತದ ನಿರ್ಣಯ ಆ ದೇಶದ ಅನೇಕ ನಾಗರಿಕರಿಗೆ ಇಷ್ಟವಾಗಿಲ್ಲ. ಕಳೆದ ವಾರ, ಒಬ್ಬ ವ್ಯಕ್ತಿ ಒಳ ಉಡುಪು, ಬೂಟುಗಳು ಮತ್ತು ಸಾಕ್ಸ್‌ಗಳಲ್ಲಿ ಟೆಸ್ಕೊ ಅಂಗಡಿಯಲ್ಲಿ ಶಾಪಿಂಗ್ ಮಾಡುವ ಮೂಲಕ ಹೊಸ ನಿಯಮವನ್ನು ವಿರೋಧಿಸಲು ನಿರ್ಧರಿಸಿದರು. ಅವರ ಸೂಪರ್ ರ್ಮಾರ್ಕೆಟ್ ಸಾಹಸದ ಕಿರು ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು
ತನ್ನ ಎಲ್ಲಾ ಪ್ಯಾಂಟ್ ಒಗೆಯಬೇಕಾದ ಸ್ಥಿತಿಯಲ್ಲಿದೆ, ಹೀಗಾಗಿ ಆಯಕಟ್ಟಿನ ಸ್ಥಳ ಮುಚ್ಚಿಕೊಳ್ಳಲು ಬಾಳೆಹಣ್ಣುಕಟ್ಟಿಕೊಂಡು ಸರ್ಕಾರದ ತೀರ್ಮಾನ ಪ್ರತಿಭಟಿಸುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನೆ.