alex Certify 10 ಗಂಟೆಗಳ ಕಾಲ ಹಿಮದಲ್ಲಿ ಸಿಲುಕಿದ್ದರೂ ಬದುಕುಳಿದ ಅದೃಷ್ಟವಂತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಗಂಟೆಗಳ ಕಾಲ ಹಿಮದಲ್ಲಿ ಸಿಲುಕಿದ್ದರೂ ಬದುಕುಳಿದ ಅದೃಷ್ಟವಂತ…!

ಕಾರಿನ ಸಮೇತ ಹಿಮದ ರಾಶಿಯಲ್ಲಿ ಬರೋಬ್ಬರಿ 10 ಗಂಟೆಗಳ ಕಾಲ ವ್ಯಕ್ತಿಯೊಬ್ಬ ಸಿಲುಕಿದ್ದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಹಿಮಪಾತದಿಂದಾಗಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ವ್ಯಕ್ತಿ 10 ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ್ದಾನೆ.

ಕೆವಿನ್​ ಕ್ರೆಸೆನ್​ ಒವೆಗೊ ಹಿಮಪಾತದ ಸಂದರ್ಭದಲ್ಲಿ ಪಟ್ಟಣದಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅವರ ವಾಹನ ಹಿಮದ ರಾಶಿಯ ನಡುವೆ ಸಿಲುಕಿಹಾಕಿಕೊಂಡಿದೆ.

ದಟ್ಟವಾದ ಹಿಮದ ರಾಶಿಯಿಂದಾಗಿ ಅವರಿಗೆ ಕಾರಿನಿಂದ ಹೊರಬರೋಕೂ ಸಾಧ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೆವಿನ್​ ತುರ್ತು ಸಂಖ್ಯೆಗೆ ಕರೆ ಮಾಡುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ 10 ಗಂಟೆಗಳ ಕೆವಿನ್​ ಹೋರಾಟವನ್ನ ಅಂತ್ಯಗೊಳಿಸಿದ್ದಾರೆ. ಕೆವಿನ್​ ಇನ್ನೊಂದು ಗಂಟೆ ಹಿಮದ ನಡುವೆ ಇದ್ದಿದ್ದರೂ ಅವರ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಅಂತಾ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...