’ಹವಾಯಿಯನ್ ರೋಲ್ಸ್’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌ನಲ್ಲಿ ಜರುಗಿದೆ.
ರಾಬರ್ಟ್ ಗಾಲಿನ್‌ಸ್ಕೀ ಹೆಸರಿನ ಈ ವ್ಯಕ್ತಿ, ’ಕಿಂಗ್ಸ್ ಹವಾಯಿ’ ಹೆಸರಿನ ಈ ಬ್ರಾಂಡ್ ಮೇಲೆ ಪ್ರಕರಣ ದಾಖಲಿಸಿದ್ದು, ರೋಲ್‌ಗಳು ಹವಾಯಿಯಲ್ಲಿ ಮಾಡಲಾಗಿದೆ ಎಂದು ನಂಬುವಂತೆ ಮಾಡಲಾಗಿದೆ. ಆದರೆ ಈ ರೋಲ್‌ಗಳನ್ನು ಕ್ಯಾಲಿಫೋರ್ನಿಯಾದ ಟಾರೆನ್ಸ್‌ನಲ್ಲಿ ಉತ್ಪಾದಿಸಲಾಗಿದೆ ಎಂಬುದು ಆತನ ದೂರು.
ಕಿಂಗ್ಸ್ ಹವಾಯಿಯನ್‌ನ ಜಾಲತಾಣದಲ್ಲಿ ಸಿಕ್ಕ ಮಾಹಿತಿ ಪ್ರಕಾರ, 1950ರ ದಶಕದಲ್ಲಿ ರಾಬಟ್ಸ್ ಬೇಕರಿ ಎಂಬ ಹೆಸರಿನಲ್ಲಿ ಸ್ಥಾಪನೆಯಾದ ಈ ಬ್ರಾಂಡ್‌ನ ಮೊದಲ ಹೆಸರು ’ಹಿಲೋ’ ಎಂದು ಇತ್ತು. ಮೊದಲಿಗೆ ಸಿಹಿ ರೋಲ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಕಂಪನಿಯನ್ನು ಹೊನಲುಲುಗೆ ವಿಸ್ತರಿಸಿದ ಬಳಿಕ ಕಿಂಗ್ಸ್ ಬೇಕರಿ ಎಂದು ಬ್ರಾಂಡ್‌ನ ಮರುನಾಮಕರಣ ಮಾಡಲಾಯಿತು. ಬಳಿಕ ಈ ಬ್ಯುಸಿನೆಸ್ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಿದ್ದು, ತನ್ನ ಸ್ವೀಟ್ ಬ್ರೆಡ್‌ಗಳನ್ನು ಅಮೆರಿಕಾದ್ಯಂತ ಪೂರೈಕೆ ಮಾಡುತ್ತಿದೆ.