alex Certify ಸಂಗಾತಿ ಗೊರಕೆ ತಪ್ಪಿಸಲು ಮಾಡಿದ್ದಾನೆ ಈ ಐಡಿಯಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿ ಗೊರಕೆ ತಪ್ಪಿಸಲು ಮಾಡಿದ್ದಾನೆ ಈ ಐಡಿಯಾ…!

ನಿಮ್ಮ ಸಂಗಾತಿ ವಿಪರೀತ ಗೊರಕೆ ಹೊಡೆಯುತ್ತಿದ್ದು, ನಿಮಗೆ ನಿದ್ರಾಭಂಗವಾಗುವುದು ಸಾಮಾನ್ಯವಾಗಿಬಿಟ್ಟಿದೆಯೇ…? ಕೆಲವೊಮ್ಮೆ ಈ ಕಿರಿಕಿರಿ ಸಹಿಸಿಕೊಳ್ಳಲಾಗದೇ ಸಾಕಷ್ಟು ಮಂದಿ ತಮ್ಮ ಸಂಗಾತಿಗಳೊಂದಿಗೆ ಜಗಳವಾಡುವ ಪ್ರಸಂಗಗಳೂ ಸಹ ಆಗಾಗ ನಡೆಯುತ್ತಲೇ ಇರುತ್ತವೆ.

ಕಳೆದ ಏಳು ತಿಂಗಳುಗಳಿಂದ ಜೊತೆಯಾಗಿ ಬಾಳುತ್ತಿರುವ ಜೇಸನ್ ಗ್ರಹಾಮ್ ಹಾಗೂ ಶಾರ್ನಿ ಬ್ರೈಟ್ ಪೆನ್ನಿ ಇದೇ ಗೊರಕೆ ಹಾಗೂ ನಿದ್ರೆಯಲ್ಲಿ ಮಾತನಾಡುವ ಸಮಸ್ಯೆ ಇರುವ ಕಾರಣ ನಿದ್ರೆ ಇಲ್ಲದೇ ಅನೇಕ ರಾತ್ರಿಗಳನ್ನು ಕಳೆಯಬೇಕಾಗಿ ಬಂದಿದೆ.

ಶಾರ್ನಿ ವಿಪರೀತ ಗೊರಕೆ ಹೊಡೆಯುವ ಕಾರಣ, ಈ ಅಭ್ಯಾಸಕ್ಕೆ ಬ್ರೇಕ್ ಹಾಕಲು ಜೇಸನ್ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಶಾರ್ನಿ ಗೊರಕೆ ಹೊಡೆಯುವ ವೇಳೆ ಉರುಳಿಸುವುದು ಸೇರಿದಂತೆ ಅನೇಕ ಸರ್ಕಸ್‌ಗಳನ್ನು ಮಾಡಿದರೂ ಪ್ರಯೋಜನವಾಗಿರಲಿಲ್ಲ.

ಇದೀಗ ಕಡೆಯ ಯತ್ನವಾಗಿ, ಶಾರ್ನಿಯ ಮುಖವನ್ನು ನೆಕ್ಕಿದಾಗ ಆಕೆ ತನ್ನ ಗೊರಕೆ ನಿಲ್ಲಿಸುವುದನ್ನು ಜೇಸನ್ ಕಂಡುಕೊಂಡಿದ್ದಾರೆ. ತನ್ನ ಸಂಗಾತಿ ಮಲಗಿದಾಗ ಏಕೆ ಹೀಗೆ ನೆಕ್ಕುತ್ತಿದ್ದಾರೆ ಎಂದು ಶಾರ್ನಿಗೆ ಮೊದಮೊದಲು ಗೊತ್ತೇ ಆಗಿರಲಿಲ್ಲ. ಕೊನೆಗೆ ಜೇಸನ್‌ ಸಚಿತ್ರವಾಗಿ ವರ್ಣಿಸಿ ಹೇಳಿದ ಬಳಿಕ ಆಕೆಗೆ ಸಂಗತಿ ಏನೆಂದು ಗೊತ್ತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...