ಕುಡಿಯುವ ಪಾನೀಯದಲ್ಲಿ ಕೊರೋನಾ ಸೋಂಕಿತನ ಎಂಜಲು ಹಾಕಿ ಸಿಬ್ಬಂದಿಯೇ ತನ್ನನ್ನು ಕೊಲ್ಲಲೆತ್ನಿಸಿದ್ದಾನೆ ಎಂದು ಕಾರ್ ಡೀಲರ್ ಒಬ್ಬರು ಪೊಲೀಸರಿಗೆ ದೂರು ಸಲ್ಲಿಸಿರುವ ವಿಚಿತ್ರ ಪ್ರಕರಣ ಟರ್ಕಿಯಲ್ಲಿ ನಡೆದಿದೆ.
ಆಗ್ನೇಯ ಟರ್ಕಿ, ಅದಾನ ಪ್ರಾಂತ್ಯದ ಇಬ್ರಾಹಿಂ ಉರ್ವೆಂದಿ ಎಂಬಾತನೇ ದೂರುದಾರ ಕಾರ್ ಡೀಲರ್ ಆಗಿದ್ದು, ತನ್ನ ಸಿಬ್ಬಂದಿಯನ್ನ ಹಿಡಿದು ಶಿಕ್ಷಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾನೆ.
ಕಾರೊಂದರ ವ್ಯವಹಾರ ಕುದುರಿಸಿದ್ದ ಉರ್ವೆಂದಿ, ಅದರಿಂದ ಬಂದ 22 ಲಕ್ಷ ರೂ. (215,000 ಟರ್ಕಿಶ್) ಹಾಗೂ ಕಾರಿನ ಕೀಲಿಕೈಯನ್ನು ಸಿಬ್ಬಂದಿಗೆ ಕೊಟ್ಟು ಕಚೇರಿಯಲ್ಲಿ ಇಡುವಂತೆ ಸೂಚಿಸಿದ್ದೆ.
ಡಬಲ್ ಮಾಸ್ಕ್ ಹಾಕಿಕೊಂಡ್ರೆ ಹೆಚ್ಚಾಗುತ್ತಾ ಸುರಕ್ಷೆ…? ಇಲ್ಲಿದೆ ಸಂಪೂರ್ಣ ಮಾಹಿತಿ
ಆದರೆ, ದುಡ್ಡು, ಕೀ ತನ್ನ ಬಳಿಯೇ ಇಟ್ಟುಕೊಂಡಿದ್ದ. ಈ ಬಗ್ಗೆ ಕೇಳಲು ದೂರವಾಣಿ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿರಲಿಲ್ಲ, ಸ್ವೀಕರಿಸಿದರೂ ನಾಳೆ ಎನ್ನುತ್ತಲೇ ಬರುತ್ತಿದ್ದ. ಕೊನೆಗೆ ಹಣದ ಆವಶ್ಯಕತೆ ಇದ್ದುದರಿಂದ ನಾನೇ ಕಳ್ಳತನ ಮಾಡಿದ್ದಾಗಿ ಹೇಳಿದ.
ಇಷ್ಟೆಲ್ಲ ಪ್ರಶ್ನಿಸಿದ್ದಕ್ಕಾಗಿ 500 ರೂ. (5,000 ಟರ್ಕಿಶ್) ಕೊಟ್ಟು ಕೊರೋನಾ ಸೋಂಕಿತನ ಎಂಜಲನ್ನು ನಾನು ಕುಡಿಯುವ ಪಾನೀಯದಲ್ಲಿ ಬೆರೆಸಿದ್ದ. ವಿಷಯ ಗೊತ್ತಾಗಿ ಅದನ್ನು ನಾನು ಕುಡಿದಿರಲಿಲ್ಲ. ಸಾಲದ್ದಕ್ಕೆ ನಿನ್ನನ್ನು ವೈರಾಣುವಿನಿಂದ ಕೊಲ್ಲುವುದಿಲ್ಲ, ಹಣೆಗೆ ಶೂಟ್ ಮಾಡಿ ಸಾಯಿಸುತ್ತೇನೆ ಎಂದಿದ್ದ. ನನಗೆ ಸೋಂಕು ತಗುಲಿದರೆ, ವಯಸ್ಸಾದ ಅಪ್ಪ, ಅಮ್ಮ ಸೇರಿದಂತೆ ಕುಟುಂಬದ ಎಲ್ಲರೂ ಸಾಯಬೇಕಾಗುತ್ತದೆ. ಶೂಟ್ ಮಾಡಿದರೆ ನಾನೊಬ್ಬನೇ ಸಾಯುತ್ತೇನೆ. ಸಾಯಿಸಲು ಇನ್ನೂ ಎಂತೆಂಥಾ ಯೋಜನೆ ಇದೆಯೋ ಎಂದಿರುವ ಉರ್ವೆಂದಿ, ಪೊಲೀಸರಿಂದ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.