
ಕಾಸ್ಮೆಟಿಕ್ ಸರ್ಜರಿಯ ಹುಚ್ಚು ಹಿಡಿಸಿಕೊಂಡಿರುವ ಬ್ರಿಟನ್‌ನ ಯುವಕನೊಬ್ಬ ತನ್ನನ್ನು ತಾನು ಬಾರ್ಬಿ ಗೊಂಬೆಯ ಪ್ರಿಯಕರನ ಹಾಗೆ ಕಾಣುವಂತೆ ಮಾಡಲು $14,000 ಖರ್ಚು ಮಾಡಿದ್ದಾನೆ.
ಜಿಮ್ಮಿ ಫೆದರ್‌ಸ್ಟೋನ್ ಹೆಸರಿನ ಈ ಯುವಕ ತುಟಿ, ಕೆನ್ನೆ ಸೇರಿದಂತೆ ಮುಖದ ಅಷ್ಟೂ ಲಕ್ಷಣಗಳಿಗೇ ಮರುಹುಟ್ಟು ಕೊಡಿಸಿಕೊಂಡು ವರ್ಷವಿಡಿ ತನ್ನ ಈ ಖಯಾಲಿಗೆಂದು ವ್ಯಯಿಸಿದ್ದಾನೆ.
ಮಕ್ಕಳಿಗೆ ಮೂರನೇ ಅಲೆ ಆತಂಕದ ಹೊತ್ತಲ್ಲೇ ಖುಷಿ ಸುದ್ದಿ: ಗೇಮ್ ಚೇಂಜರ್ ಆಗಲಿದೆ ʼಮೇಡ್ ಇನ್ ಇಂಡಿಯಾʼ ಮೂಗಿನ ಲಸಿಕೆ
ಇಂಗ್ಲೆಂಡ್‌ನ ಉತ್ತರಭಾಗದಲ್ಲಿರುವ ಹಲ್ ಎಂಬ ಪಟ್ಟಣದ ಈತ ತನ್ನ ಸ್ನೇಹಿತನೊಬ್ಬನ ಬೊಟಿಕ್‌ನಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಾನೆ. 16ರ ವಯಸ್ಸಿನಲ್ಲೇ ಕಾಲೇಜು ತೊರೆದ ಈತ ಹೆಚ್ಚು ದುಡ್ಡು ಸಂಪಾದನೆ ಮಾಡಲು ಅನೇಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾನೆ. ಕಷ್ಟ ಪಟ್ಟು ಸಂಪಾದಿಸಿದ ಅಷ್ಟೂ ದುಡ್ಡನ್ನು ತನ್ನ ಮೆಚ್ಚಿನ ’ಕೆನ್ ಡಾಲ್ ಕಾಸ್ಮೆಟಿಕ್ ಸರ್ಜರಿಗೆ’ ವ್ಯಯಿಸಿದ್ದಾನೆ ಫೆದರ್‌ಸ್ಟೋನ್.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ 78 ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ
ತನ್ನ ಮುಖದ ಮೇಲೆ ಪ್ಲಾಸ್ಟಿಕ್ ಇರುವುದು ಚೆಂದ ಎನ್ನುತ್ತಾನೆ ಫೆದರ್‌ಸ್ಟೋನ್.