ಕೆರೊಲಿನಾ: ಆಟೋ ಪೈಲಟ್, ಆಟೊಮೆಟಿಕ್ ಬ್ರೇಕಿಂಗ್ ವ್ಯವಸ್ಥೆಯಿಂದ ಟೆಸ್ಲಾ ಕಾರು ಪ್ರಸಿದ್ಧವಾಗಿದೆ. ಡ್ರೈವರ್ ಸೀಟ್ ನಲ್ಲಿ ಚಾಲಕನೇ ಇಲ್ಲದೇ ವಾಹನ ತುಂಬಿದ ಹೈವೆಯಲ್ಲಿ ಟೆಸ್ಲಾ ಕಾರು ಓಡುವ ವಿಡಿಯೋವೊಂದು ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಕೆರೊಲಿನಾದ ಅಲ್ಬರ್ಟ್ ಸಿಪ್ಲೆನ್ ಎಂಬ ಟೆಸ್ಲಾ ಎಕ್ಸ್ ಮಾಡೆಲ್ ನ ಮಾಲೀಕ. ಆತ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತು ಕಾರು ಓಡಿಸುತ್ತಿರುವ ವಿಡಿಯೋ ಮಾಡಿದ್ದಾರೆ. ಅದರ ಆಟೊ ಪೈಲಟ್ ವ್ಯವಸ್ಥೆಯ ಬಗ್ಗೆ ಹೈಲೈಟ್ ಮಾಡಿದ್ದಾರೆ. ಹೆದ್ದಾರಿಯಲ್ಲಿ ಯಾವುದೇ ತೊಂದರೆ, ಅಪಾಯ ಇಲ್ಲದೇ ಕಾರು ಓವರ್ ಟೇಕ್ ಮಾಡಿಕೊಂಡು ಮುಂದೋಡುವ ದೃಶ್ಯಗಳು ವಿಡಿಯೋದಲ್ಲಿವೆ.
ಆಧುನಿಕ ಸುರಕ್ಷತಾ ವಿಧಾನಗಳು, ಆಟೋಪೈಲಟ್ ಚಾಲಕರ ಮೇಲಿನ ಹಲವು ಒತ್ತಡ ಕಡಿಮೆ ಮಾಡುತ್ತವೆ. ಈಗಿನ ಕಾರ್ಯನಿರ್ವಹಣೆಯನ್ನು ಇನ್ನಷ್ಟು ವೃದ್ಧಿಸಲಾಗುತ್ತದೆʼʼ ಎಂದುಕಂಪನಿಯ ವೆಬ್ ಸೈಟ್ ನಲ್ಲಿ ಬರೆಯಲಾಗಿದೆ.