ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದ ತನ್ನ ಪೋರ್ಶ್ ಕಾರನ್ನು ಪೊಲೀಸರು ಎತ್ತಾಕಿಕೊಂಡು ಹೋಗುವುದನ್ನು ತಡೆಗಟ್ಟಲೆಂದು, ಟ್ರಕ್ ಎದುರು ಐದು ಗಂಟೆಗಳ ಕಾಲ ಧರಣಿ ಕುಳಿತಿದ್ದಾನೆ ಅದರ ಮಾಲೀಕ.
ಉತ್ತರ ಲಂಡನ್‌ನ ಹೈಗೇಟ್ ಪ್ರದೇಶದ ನಿವಾಸಿ ಪೀಟರ್ ಫೆನ್ನೆಲ್ ಹೆಸರಿನ ಈ ವ್ಯಕ್ತಿ ತನ್ನ ಬಳಿ ಇದ್ದ 1980ರ ದಶಕದ ಮಾಡೆಲ್‌ನ ಪೋರ್ಶ್ 944 ಕಾರನ್ನು ಅವಳಿ ಹಳದಿ ಲೈನ್‌ಗಳ ಮೇಲೆ ನಿಲ್ಲಿಸಿದ್ದ.
ತನ್ನ ಈ ಪ್ರಮಾದಕ್ಕೆ ದಂಡ ವಿಧಿಸಿದ್ದರೆ ಸಾಕಿತ್ತು ಆದರೆ ಅದನ್ನು ಎತ್ತೊಯ್ಯುವುದು ಎಷ್ಟು ಸರಿ ಎಂಬುದು ಪೀಟರ್ ಪ್ರಶ್ನೆ. ಹಾಗಾಗಿ, ತನ್ನ ಕಾರನ್ನು ಪಿಕ್ ಮಾಡಿದ ಪೊಲೀಸ್ ಟ್ರಕ್ ಎದುರು ಕುರ್ಚಿಯೊಂದನ್ನು ಹಾಕಿಕೊಂಡು ಕುಳಿತ 54 ವರ್ಷದ ಪೀಟರ್, ಅಲ್ಲಿಂದಲೇ ತನ್ನ ಆಫೀಸ್ ಕೆಲಸ ಮಾಡಿಕೊಂಡಿದ್ದಾರೆ. ತಮ್ಮ ಕಾರನ್ನು ಮತ್ತೊಂದು ಬದಿಯಿಂದ ಒಯ್ಯದಂತೆ ನೋಡಿಕೊಳ್ಳಲು ಪೀಟರ್ ಮಡದಿ ಅದರ ಹಿಂದೆ ಅಷ್ಟೇ ಹೊತ್ತು ಕಳೆದಿದ್ದಾರೆ.
ಸತಿ-ಪತಿಯರ ಈ ಹೊಂದಾಣಿಕೆಯ ಹೋರಾಟಕ್ಕೆ ಕೊನೆಗೂ ಮಣಿದ ಸಂಚಾರಿ ಪೊಲೀಸ್ ಅಧಿಕಾರಿಗಳು ಕೊನೆಗೂ ಆ ಕಾರನ್ನು ರಿಲೀಸ್ ಮಾಡಲು ಒಪ್ಪಿದ್ದಾರೆ.