
ಊಟಕ್ಕೆ ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಮ್ಯಾಗ್ಪೀ ಪಕ್ಷಿಯೊಂದು ದಾಳಿ ಮಾಡಿದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿ ಘಟಿಸಿದೆ.
ಜೇಮ್ಸ್ ಗ್ಲಿಂಡೆಮಾನ್ ಹೆಸರಿನ 68ರ ಹರೆಯದ ವ್ಯಕ್ತಿ ತಮ್ಮ ಚೈನೀಸ್ ಲಂಚ್ ಒಂದನ್ನು ಎಂಜಾಯ್ ಮಾಡಲು ಮುಂದಾದಾಗ ಅವರ ಎದುರು ಬಂದ ಮ್ಯಾಗ್ಪೀ ಅವರನ್ನೇ ದಿಟ್ಟಿಸಿ ನೋಡಿದೆ. ಆಗ ಅದರೊಂದಿಗೆ ಮಾತನಾಡಲು ಮುಂದಾದ ಜೇಮ್ಸ್‌ರ ಬಲಗಣ್ಣಿಗೆ ಕಣ್ಣಿಗೆ ಕುಕ್ಕಿದ ಮ್ಯಾಗ್ಫೀ ಮಾಡಿದ ಗಂಭೀರ ಗಾಯದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿ ಬರಬೇಕಾಯಿತು. ಎರಡು ಗಂಟೆಗಳ ಸರ್ಜರಿ ಬಳಿಕ ಅವರ ಕಣ್ಣುಗಳನ್ನು ಸರಿ ಮಾಡಲಾಗಿದೆ.
ಈ ಘಟನೆಯು ಮೆಲ್ಬರ್ನ್‌ನಿಂದ 200ಕಿಮೀ ದೂರದಲ್ಲಿರುವ ಸೇಲ್ ಎಂಬ ಊರಿನ ಮಾಲ್ ಒಂದರಲ್ಲಿ ನಡೆದಿದೆ.