alex Certify ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಪಾಪಿಗೆ 600 ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಪಾಪಿಗೆ 600 ವರ್ಷ ಜೈಲು

Man Sentenced to 600 Years in Prison Following Sexual Assault on Children in US

ನ್ಯೂಯಾರ್ಕ್: ಮಕ್ಕಳಿಬ್ಬರ ಮೇಲೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಅಮೆರಿಕಾದ ನ್ಯಾಯಾಲಯವೊಂದು 600 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.‌

ಕೋಟನ್ ಡೆಲ್ ಪ್ರದೇಶದ ಮ್ಯಾಥ್ಯೂ ಟೇಲರ್ ಮಿಲ್ಲರ್ ಎಂಬ 32 ವರ್ಷದ ಅಪರಾಧಿಗೆ ಅಮೆರಿಕಾ ಜಿಲ್ಲಾ ನ್ಯಾಯಾಧೀಶರಾದ ಸ್ಕೋಟ್ ಕೂಗ್ ಲರ್ ಅವರು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.‌

ಮಿಲ್ಲರ್ ಕೇವಲ ಅತ್ಯಾಚಾರ ಮಾಡಿದ್ದು ಮಾತ್ರವಲ್ಲ. ಮಕ್ಕಳ ಬಾಲ್ಯವನ್ನೇ ಕಸಿದಿದ್ದಾನೆ. ಹೇಸಿಗೆ ಕೆಲಸ ಮಾಡಿದ್ದಾನೆ ಎಂದು ಎಫ್.ಐ.ಬಿ.ವಿಶೇಷ ತನಿಖಾ ದಳದ ಅಧಿಕಾರಿ ಜೊನಿ ಶಾರ್ಪ್ ಜೆ.ಆರ್.‌ಹೇಳಿಕೆ ನೀಡಿದ್ದಾರೆ.

ಮಕ್ಕಳು 4 ವರ್ಷದವರಿದ್ದಾಗಿನಿಂದ ಅವರನ್ನು 2014 ರಿಂದ 19 ರವರೆಗೆ ಲೈಂಗಿಕವಾಗಿ ಬಳಸಿಕೊಂಡಿದ್ದ. ಆತನನ್ನು 2019 ರ ಅಕ್ಟೋಬರ್ ನಲ್ಲಿ ಬಂಧಿಸಲಾಯಿತು‌. ಆಗ ಆತನಿಂದ ಮಕ್ಕಳ ಜೊತೆಗಿನ ಕಾಮ ಪ್ರಚೋದಕ ಫೋಟೋಗಳನ್ನು ವಶಕ್ಕೆ ಪಡೆಯಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...