ಕಚೇರಿಯಲ್ಲಿ ತನ್ನ ಗಂಡ ಮನೆಯಲ್ಲಿ ಮಾಡಿದ ಊಟ ತಿಂದು ಚೆನ್ನಾಗಿರಲಿ ಎಂದು ಡಬ್ಬಿಯಲ್ಲಿ ಊಟ ಹಾಕಿಕೊಟ್ಟರೆ ಆತ ಅದರ ಬದಲಿಗೆ ಫಾಸ್ಟ್ ಫುಡ್ ತಿನ್ನಲು ಡಬ್ಬಿ ಊಟವನ್ನೇ ಮಾರುತ್ತಿದ್ದ ಎಂಬ ವಿಷಯ ತಿಳಿದ ಪತ್ನಿಯೊಬ್ಬರ ಸಿಟ್ಟು ನೆತ್ತಿಗೇರಿದೆ.
ಇಬ್ಬರೂ ಸೇರಿಕೊಂಡು ಫ್ಲಾಟ್ ಒಂದನ್ನು ಖರೀದಿ ಮಾಡಲು ಪ್ಲಾನ್ ಮಾಡುತ್ತಿರುವ ಕಾರಣ ದುಡ್ಡು ಉಳಿತಾಯ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಈ ದಂಪತಿ.
ಕೆಲಸದ ಜಾಗದಲ್ಲಿ ಸಿಗುವ ಫಾಸ್ಟ್ ಫುಡ್ ಖರೀದಿ ಮಾಡುವುದರಿಂದ ತನ್ನ ಪತಿಗೆ ಹೆಚ್ಚುವರಿಯಾಗಿ 200 ಪೌಂಡ್‌ಗಳಷ್ಟು (20,484 ರೂಪಾಯಿ) ಖರ್ಚಾಗುತ್ತಿತ್ತಂತೆ.
ಮನೆಯಲ್ಲೇ ಸ್ಯಾಂಡ್‌ವಿಚ್ ಮಾಡಿ ಕಳುಹಿಸುವುದರಿಂದ ದುಡ್ಡು ಉಳಿಸುವುದಲ್ಲದೇ ಆರೋಗ್ಯಯುತವಾದ ಆಹಾರವನ್ನೂ ಸೇವಿಸಿದಂತೆ ಆಗುತ್ತದೆ ಎಂದು ಇಬ್ಬರೂ ಮಾತಾಡಿಕೊಂಡಿದ್ದರು. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿತ್ತು. ಆದರೆ ಬರುಬರುತ್ತಾ, ತಾನು ಮಾಡಿದ ಸ್ಯಾಂಡ್‌ವಿಚ್ ಹೇಗಿದೆ ಎಂದು ಮಡದಿ ಕೇಳಿದ ಪ್ರಶ್ನೆಗೆ ಉತ್ತರಿಸದ ಆಕೆಯ ಪತಿ, ತನಗೆ ಬಹಳ ಹಸಿವಿದ್ದು, ’ಇನ್ನಷ್ಟು ಸ್ಯಾಂಡ್‌ವಿಚ್‌ಗಳು ಬೇಕು’ ಎನ್ನುತ್ತಾ ಬಂದಿದ್ದಾನೆ. ಪತಿಯ ಸಹೋದ್ಯೋಗಿಯೊಬ್ಬರು ದಂಪತಿಯ ಮನೆಗೆ ಭೇಟಿ ಕೊಟ್ಟ ವೇಳೆ ಕಥೆಗೆ ಟ್ವಿಸ್ಟ್ ಸಿಕ್ಕಿದೆ.
ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್
“ಡಿನ್ನರ್ ಟೇಬಲ್ ಸುತ್ತ ಕುಳಿತಿದ್ದ ವೇಳೆ, ನಾನು ನನ್ನ ಪತಿಗೆಂದು ಮಾಡಿ ಕಳುಹಿಸುತ್ತಿದ್ದ ಸ್ಯಾಂಡ್‌ವಿಚ್ ಅನ್ನು ತಂದ ಅವರ ಸ್ನೇಹಿತರೊಬ್ಬರು ಅವು ಬಲೇ ರುಚಿಯಾಗಿವೆ ಎಂದಿದ್ದಾರೆ. ನಾನು ಥ್ಯಾಂಕ್ಸ್ ಎಂದು ಹೇಳಿದ ಮೇಲೆ ಸ್ಯಾಂಡ್‌ವಿಚ್ ಬೆಲೆ ಜಾಸ್ತಿ ಆಯಿತು ಎಂದಿದ್ದಾರೆ”
“ನನಗೆ ಗೊಂದಲವಾಗಿ ವಿಷಯವನ್ನು ವಿಸ್ತರಿಸಿ ಹೇಳಲು ಕೇಳಿದಾಗ, ನಾನು ಮಾಡುವ ಸ್ಯಾಂಡ್‌ವಿಚ್‌ಗಳನ್ನು ಸಹೋದ್ಯೋಗಿಗಳಿಗೆ ಮಾರಿ ರೆಸ್ಟೋರಂಟ್ ಒಂದಕ್ಕೆ ಹೋಗಿ ಅಲ್ಲಿ ಊಟ ಮಾಡುತ್ತಾರೆ ಎಂದು ಅವರು ತಿಳಿಸಿದರು. ಇದನ್ನು ಕೇಳಿ ನನಗೆ ಅಚ್ಚರಿಯಾಯಿತು. ನನ್ನ ಪತಿ ಈ ವಿಷಯವನ್ನು ನಿರಾಕರಿಸಿದರು. ಬಹಳ ಹೊತ್ತಿನ ಮಾತಿನ ಚಕಮಕಿ ಬಳಿಕ ಕೊನೆಗೂ ತಾವು ಮಾಡಿದ್ದನ್ನು ಒಪ್ಪಿಕೊಂಡ ಅವರು, ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ” ಎನ್ನುತ್ತಾರೆ ಪತ್ನಿ.
ತಾಂತ್ರಿಕವಾಗಿ ತನ್ನ ಉಳಿತಾಯದ ದುಡ್ಡನ್ನೇನೂ ವ್ಯರ್ಥ ಮಾಡುತ್ತಿಲ್ಲವೆಂಬುದು ಪತಿಯ ವಾದ. ಈ ಕಥೆಯ ಬಗ್ಗೆ ನೆಟ್ಟಿಗರಲ್ಲಿ ಥರಾವರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಡದಿ ಪ್ರೀತಿಯಿಂದ ಮಾಡಿಕೊಟ್ಟ ಊಟವನ್ನು ಹೀಗೆ ಮಾರಾಟ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.