ಹಕ್ಕಿಗಳಿಗಾಗಿ ಮರದ ಮೇಲೆ ಇಟ್ಟ ಆಹಾರವನ್ನು ಕಳ್ಳ ಕರಡಿಯೊಂದು ಕದಿಯಲು ಮುಂದಾಗಿದ್ದ ಘಟನೆ ಈಗ ತುಂಬಾ ಜನರ ಗಮನ ಸೆಳೆದಿದೆ.
ಸ್ಕಾಟ್ ಬಿಕ್ಸ್ ಬೈ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕರಡಿ 50 ಅಡಿಗೂ ಎತ್ತರದ ಮರ ಹತ್ತಿ ಅದರ ಮೇಲಿಟ್ಟ ಹಕ್ಕಿಗಳ ಆಹಾರ ತಿನ್ನಲು ಮುಂದಾಗುತ್ತದೆ. ವ್ಯಕ್ತಿ ಬೈದು ಕರಡಿಯನ್ನು ಕೆಳಗಿಳಿಸುವ ಸನ್ನಿವೇಶ ವಿಡಿಯೋದಲ್ಲಿದೆ.
ಮೊದಲು ಕೆಳಗಿಳಿಯಲು ಹಿಂದೇಟು ಹಾಕಿದ ಕರಡಿ ನಂತರ ವ್ಯಕ್ತಿಯ ದೊಡ್ಡ ಧ್ವನಿಗೆ ಹೆದರಿ ಇಳಿಯುತ್ತದೆ.
ಮೈಕ್ರೊ ಬ್ಲಾಗರ್ ನಲ್ಲಿ ವಿಡಿಯೋವನ್ನು 4.6 ಲಕ್ಷ ಜನ ನೋಡಿದ್ದಾರೆ.
https://twitter.com/scottbix/status/1273380050403037184?ref_src=twsrc%5Etfw%7Ctwcamp%5Etweetembed%7Ctwterm%5E1273380050403037184&ref_url=https%3A%2F%2Fwww.timesnownews.com%2Fthe-buzz%2Farticle%2Fman-scolds-bear-for-stealing-food-from-birdfeeder-netizens-tell-him-its-not-a-dog-watch%2F609211