ಬ್ಯಾಸ್ಕೆಟ್ ಬಾಲನ್ನು ಡ್ರಿಬ್ಲಿಂಗ್ ಮಾಡಿಕೊಂಡು ಒಂದು ಮೈಲಿ ದೂರ ಓಡಿದ ದುಬೈನ ಅಥ್ಲೀಟ್ ಅಝ್ಮತ್ ಖಾನ್ ನೂತನ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ. ಅವರು ಈ ಸಾಧನೆಯನ್ನು ಕೇವಲ ಆರು ನಿಮಿಷಗಳಲ್ಲಿ ಮಾಡಿ ಮುಗಿಸಿದ್ದಾರೆ.
ಖಾನ್ ರ ಮುಂದೆ ಹೋಗುತ್ತಿದ್ದ ಇಬ್ಬರು ಸೈಕ್ಲಿಸ್ಟ್‌ಗಳು ತಮ್ಮ ಮೊಬೈಲ್ ಫೋನ್ ನಲ್ಲಿ ಅವರ ಓಟದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪಾಕಿಸ್ತಾನ ಮೂಲದ ಖಾನ್, 3-42 ಕಿಮೀ ಅಂತರದ ದೂರಗಾಮಿ ಓಟದಲ್ಲಿ ಭಾಗಿಯಾಗಿ ಯುಎಇ ಉದ್ದಗಲದಲ್ಲಿ ಫೇಮಸ್ ಆಗಿದ್ದಾರೆ. ಅವರಿಗೆ ದಾಖಲೆ ಸೃಷ್ಟಿಸುವುದು ಹವ್ಯಾಸವಾಗಿದೆ.
ಮಾರ್ಚ್ 2019ರಲ್ಲಿ 44 ನಿಮಿಷ 19 ಸೆಕೆಂಡ್‌ಗಳಲ್ಲಿ 10 ಕಿಮೀ ಮ್ಯಾರಾಥಾನ್ ಓಡಿದ್ದ ಖಾನ್ ಅದೊಂದು ದಾಖಲೆಯನ್ನೂ ನಿರ್ಮಿಸಿದ್ದರು.
https://www.instagram.com/p/CFrelfCnC9L/?utm_source=ig_web_copy_link