alex Certify ಕೆಲಸ ಕೇಳಿಕೊಂಡು ಬಂದವನು ಹಣ ಕದ್ದು ಪರಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕೇಳಿಕೊಂಡು ಬಂದವನು ಹಣ ಕದ್ದು ಪರಾರಿ…!

ನಾರ್ತಾಂಪ್ಟನ್: ಪಿಜ್ಜಾ ಮಾರಾಟ ಅಂಗಡಿಯೊಂದರಲ್ಲಿ ಕೆಲಸ ಕೇಳಿಕೊಂಡು ಬಂದ ವ್ಯಕ್ತಿ ಹಣ ಕದ್ದು ಪರಾರಿಯಾದ ಘಟನೆ ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್) ನಲ್ಲಿ ನಡೆದಿದೆ.

ನಾರ್ತಾಂಪ್ಟನ್ ನ ಉತ್ತರ ಕೆಟಸಾಕ್ವಾದ ಡಿ-ಓರಾ ಎಂಬ ಪಿಜ್ಜಾ ಹಟ್ ನಲ್ಲಿ ಕೆಲಸ ಕೇಳಿಕೊಂಡು ಬಂದ 22 ವರ್ಷದ ನಿಕೋಲಸ್ ಎಂ ಮಾರ್ಕ್ 220 ಡಾಲರ್ ಹಣ ಕದ್ದು ಪರಾರಿಯಾಗಿದ್ದ. ಪಿಜ್ಜಾ ಅಂಗಡಿ ಸಿಬ್ಬಂದಿಯೊಬ್ಬ ಆತನನ್ನು ಹಿಂಬಾಲಿಸಿದಾಗ ಚಾಕು ತೋರಿಸಿ ಬೆದರಿಸಿದ್ದ.

ಆತ ಪಿಜ್ಜಾ ಹಟ್ ನಲ್ಲಿ ಕೆಲಸಕ್ಕಾಗಿ ಸಲ್ಲಿಸಿದ ಅರ್ಜಿಯಲ್ಲಿ ಹೆಸರು, ವಿಳಾಸ ಎಲ್ಲ ಇತ್ತು. ಅದನ್ನು ನೋಡಿ ಪೊಲೀಸರು ಕೆಲವರನ್ನು ತಂದು ಸಾಲಾಗಿ ನಿಲ್ಲಿಸಿದ್ದರು ಪಿಜ್ಜಾ ಹಟ್ ಸಿಬ್ಬಂದಿ ಮಾರ್ಕ್ ನನ್ನು ಗುರುತಿಸಿದ್ದಾರೆ. ಆತನ ವಿರುದ್ಧ ಕಳ್ಳತನ, ಮಾರಕಾಸ್ತ್ರ ಬಳಕೆ, ಜೀವ ಬೆದರಿಕೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...