1955ರಲ್ಲಿ ಬರೆದು ಪೋಸ್ಟ್ ಮಾಡಲಾಗಿದ್ದ ಅಂಚೆ ಪತ್ರವೊಂದು ಬರೋಬ್ಬರಿ ಆರೂವರೆ ದಶಕಗಳ ಬಳಿಕ ನಿವೃತ್ತ ಸೇಲ್ಸ್ಮ್ಯಾನ್ ಕೈ ಸೇರಿದೆ. ಬ್ರಿಟೀಷ್ ಪ್ರಜೆ ಕ್ರಿಸ್ ಹಾರ್ಮೋನ್ 9 ವರ್ಷ ವಯಸ್ಸಿನವರಾಗಿದ್ದಾಗ ಈ ಪತ್ರವನ್ನ ಪಡೆಯಬೇಕಿತ್ತು.
ಅಮೆರಿಕದಲ್ಲಿದ್ದ ಹಾರ್ಮೋನ್ರ ಗೆಳೆಯ ಈ ಪತ್ರವನ್ನ ಬರೆದು ಪೋಸ್ಟ್ ಮಾಡಿದ್ದರು. ಆದರೆ ಈ ಪತ್ರ ಹಾರ್ಮೋನ್ ಕೈಗೆ ಇಷ್ಟು ದಿನ ತಲುಪೇ ಇರಲಿಲ್ಲ.
ಆದರೆ ಕೆಲ ತಿಂಗಳ ಹಿಂದೆ ಚ್ಯಾರಿಟಿ ಶಾಪ್ ಒಂದು ಈ ಪತ್ರವನ್ನ ಕಂಡಿದೆ. ಕೊನೆಗೆ ಫೇಸ್ಬುಕ್ನಲ್ಲಿ ಕ್ರಿಸ್ ಹಾರ್ಮೊನ್ರ ವಿಳಾಸವನ್ನ ಪತ್ತೆ ಹಚ್ಚಿದ ಚ್ಯಾರಿಟಿ ಶಾಪ್ ಈ ಪತ್ರವನ್ನ ಹಾರ್ಮೊನ್ಗೆ ಕಳಿಸಿದೆ. 1955ರ ಕಾಲದ ಪತ್ರವನ್ನ ಸ್ವೀಕರಿಸಲು ಹಾರ್ಮೋನ್ ಸಿಕ್ಕಾಪಟ್ಟೆ ಉತ್ಸುಕರಾಗಿದ್ದರು.
ಈ ಪತ್ರವನ್ನ ಓದಿದ ಬಳಿಕ ಹಾರ್ಮೋನ್ ತನ್ನ ಸ್ನೇಹಿತನನ್ನ ಹುಡುಕಲು ಯತ್ನಿಸಿದ್ದಾರೆ. ಆದರೆ ಅವರು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಬಳಿಕ ತಿಳಿದು ಬಂದಿದೆ.