
ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶ್ವಾನಗಳು ಅಂತಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಅನ್ನ ಹಾಕಿದವರನ್ನ ರಕ್ಷಿಸಬೇಕು ಅನ್ನೋ ನಿಯತ್ತು ನಾಯಿಗಳಿಗೆ ಇರುತ್ತೆ. ತಮಗೇನೆ ಕಷ್ಟ ಬರಲಿ ಜೀವದ ಹಂಗು ತೊರೆದಾದ್ರೂ ತಮ್ಮ ಮಾಲೀಕನನ್ನ ರಕ್ಷಿಸುವಷ್ಟರ ಮಟ್ಟಿಗೆ ನಾಯಿಗಳು ಸ್ವಾಮಿನಿಷ್ಠೆಯನ್ನ ಹೊಂದಿರುತ್ತೆ.
ತಾನು ಸಾಕಿದ ನಾಯಿ ಎಷ್ಟು ಪ್ರಾಮಾಣಿಕ ಅಂತ ನೋಡೋಕೆ ಮಹಿಳೆಯೊಬ್ಬರು ಪ್ಲಾನ್ ಮಾಡಿದ್ದಾರೆ. ನಾಯಿಯ ಜೊತೆಯೇ ಇದ್ದ ಆಕೆಯ ಪತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಂತೆ ನಾಟಕವಾಡಿದ್ದಾರೆ. ಆದರೆ ಇದು ನಾಟಕ ಎಂದು ಗೊತ್ತಿಲ್ಲದ ಆ ನಾಯಿ ತನ್ನ ಮಾಲೀಕನನ್ನ ಎಬ್ಬಿಸೋಕೆ ಪ್ರಯತ್ನ ಮಾಡಿದೆ. ಅದು ಸಾಧ್ಯವಾಗದೇ ಇದ್ದಾಗ ಆತನ ಮೈಮೇಲೆ ಕೂತು ತನ್ನ ಮಾಲೀಕನ ರಕ್ಷಣೆಗೆ ಮುಂದಾಗಿದೆ.
18 ಸೆಕೆಂಡ್ಗಳ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರೋ ಆ ಮಹಿಳೆ ತನ್ನ ನಾಯಿಯ ಬುದ್ಧಿಯನ್ನ ಕೊಂಡಾಡಿದ್ದಾಳೆ. ಟ್ವಿಟರ್ನಲ್ಲಿ ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಶ್ವಾನದ ಸ್ವಾಮಿನಿಷ್ಠೆಗೆ ಸಲಾಂ ಎಂದಿದ್ದಾರೆ.
https://twitter.com/akkitwts/status/1316382894361722886?ref_src=twsrc%5Etfw%7Ctwcamp%5Etweetembed%7Ctwterm%5E1316382894361722886%7Ctwgr%5Eshare_3%2Ccontainerclick_0&ref_url=https%3A%2F%2Fwww.indiatoday.in%2Ftrending-news%2Fstory%2Fman-pretends-to-faint-to-see-pet-dog-s-reaction-in-viral-video-internet-is-divided-1731705-2020-10-15