ನಿಮಗೇನಾದ್ರೂ ಬಾಯ್ಫ್ರೆಂಡ್ ಇದ್ದು ಆತ ಮೊಣಕಾಲ ಮೇಲೆ ನಿಂತು ಕೈಯಲ್ಲಿ ಆಭರಣದ ಬಾಕ್ಸ್ ಹಿಡಿದುಕೊಂಡರೆ ಅದರೊಳಗೆ ಏನಿದೆ ಎಂದು ನೀವು ಊಹಿಸುತ್ತೀರಿ..?
ಒಂದು ವೇಳೆ ನೀವು 6 ವರ್ಷಗಳ ಕಾಲ ಜೊತೆಯಲ್ಲಿ ಇದ್ದದ್ದಾಗಿದ್ರೆ ಆತ ಮದುವೆಗೆ ಪ್ರಪೋಸಲ್ ಮಾಡ್ತಿರಬಹುದು ಎಂದೆನಿಸೋದು ಸಹಜ. ಆದರೆ ಇಲ್ಲೊಂದು ಜೋಡಿ ನಕಲಿ ಪ್ರಪೋಸಲ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿ ಮುಂದೆ ಜ್ಯುವೆಲ್ಲರಿ ಬಾಕ್ಸ್ನ್ನ ಹಿಡಿಯುತ್ತಾನೆ. ಐ ಲವ್ ಯೂ ಸೋ ಮಚ್. ನಮ್ಮ ಸ್ನೇಹಕ್ಕೆ 6 ವರ್ಷಗಳೇ ಕಳೆದವು. ದಯಮಾಡಿ ನೀನು……ಎಂದು ಬಾಕ್ಸ್ನ್ನ ತೆರೆಯುತ್ತಾನೆ. ಅಷ್ಟರಲ್ಲಾಗಲೇ ಆಕೆಯ ಮೊಗದಲ್ಲಿ ಆನಂದ ಭಾಷ್ಪ ಹರಿಯುತ್ತಿರುತ್ತದೆ.
ವಿಚಿತ್ರ ಅಂದ್ರೆ ಆತ ಪ್ರಪೋಸಲ್ಗೆ ಉಂಗುರವನ್ನ ನೀಡುವ ಬದಲು ಕಿವಿಯೋಲೆ ನೀಡುತ್ತಾನೆ. ಈ ವೇಳೆ ಹಿಂಬದಿಯಿಂದ ನನಗಿದು ಮೊದಲೇ ಗೊತ್ತಿತ್ತು ಎಂದು ಹೇಳಿ ನಗಾಡುವ ಧ್ವನಿಯೊಂದು ಕೇಳುತ್ತದೆ. ಟಿಕ್ಟಾಕ್ನಲ್ಲಿ ಪೋಸ್ಟ್ ಆದ ವಿಡಿಯೋ ಭಾರೀ ವೈರಲ್ ಆಗಿದೆ. ನೆಟ್ಟಿಗರು ನಕಲಿ ಪ್ರೇಮ ನಿವೇದನೆ ಮಾಡಿದ ವ್ಯಕ್ತಿಗೆ ಖಾರವಾದ ಕಮೆಂಟ್ ಹಾಕಿದ್ದಾರೆ.
ಇದಾದ ಬಳಿಕ ಮಹಿಳೆ ನನ್ನ ಪ್ರಿಯತಮ ನಿಜಕ್ಕೂ ಒಳ್ಳೆಯ ವ್ಯಕ್ತಿ. ಈ ವಿಡಿಯೋ ಫನ್ನಿ ಇದೆ ಎಂಬ ಕಾರಣಕ್ಕೆ ಪೋಸ್ಟ್ ಮಾಡಿದ್ದೆವು. ನಮ್ಮ ನಡುವೆ ಇಂತಹ ತಮಾಷೆಗಳು ನಡೆಯುತ್ತಲೇ ಇರುತ್ತವೆ. ನಾವು ಈಗ ಎಂಗೇಜ್ಡ್ ಆಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾಳೆ.
https://youtu.be/RD8UDu1AcA8?t=1