ಭೌತಶಾಸ್ತ್ರ ವಿದ್ಯಾರ್ಥಿಯೊಬ್ಬ ಬೇಜಾರು ಕಳೆಯಲೆಂದು ಮಾಡಿದ ಕ್ರಿಯೇಟಿವ್ ಕೆಲಸವೊಂದು ವೈರಲ್ ಆಗಿ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.
ಫೋಟೋಶಾಪ್ ನೆರವಿನಿಂದ ಫ್ರಿಡ್ಜ್ ಒಳಗೆ ತಾನು ಹಾಗೂ ತನ್ನ ಮಿತ್ರರಿಬ್ಬರು ಇರುವಂತೆ ಫೋಟೋ ಎಡಿಟ್ ಮಾಡಿದ್ದಾರೆ. ನ್ಯೂಯಾರ್ಕಿನಲ್ಲಿ ವಾಸವಿರುವ ಸಯೀದ್ ಹೆಸರಿನ ಈ ವಿದ್ಯಾರ್ಥಿ ಮೂಲತಃ ಪ್ಯಾಲಿಸ್ತೀನ್ನವರು. ಕೆನಡಾದ ಪಶ್ಚಿಮ ಒಂಟಾರಿಯೋ ವಿವಿಯಲ್ಲಿ ಸಯೀದ್ ವ್ಯಾಸಂಗ ಮಾಡುತ್ತಿದ್ದಾರೆ.
ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!
ಫ್ರಿಡ್ಜ್ನ ಸ್ಕ್ರೀನ್ ಮೂಲಕ ಅದರೊಳಗೆ ತಾವು ಇರುವಂತೆ ಕಾಣುವಂತೆ ಫೋಟೋ ಎಡಿಟ್ ಮಾಡಿರುವ ಸಯೀದ್, ಟ್ವಿಟರ್ನಲ್ಲಿ ಇಂಥ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ.