ನಟ್ಟ ನಡು ರಾತ್ರಿಯಲ್ಲಿ ನಗರದ ಮಧ್ಯದಲ್ಲಿ ಪ್ಯಾರಾಚೂಟ್ ಕಟ್ಟಿಕೊಂಡು ಹಾರಲು ಹೋದ ವ್ಯಕ್ತಿಯೊಬ್ಬ ಬಿಲ್ಡಿಂಗ್ ಒಂದಕ್ಕೆ ಸಿಕ್ಕಿ ಹಾಕಿಕೊಂಡು ನೇತಾಡಿದ ಘಟನೆ ಓಹಿಯೋ ಕ್ಲೆವರ್ ಲ್ಯಾಂಡ್ ನಲ್ಲಿ ಆಗಸ್ಟ್ 9 ರಂದು ನಡೆದಿದೆ.
35 ವರ್ಷದ ವ್ಯಕ್ತಿ ತನ್ನ ನಾಲ್ವರು ಸ್ನೇಹಿತರ ಜತೆ ಎತ್ತರದ ಕಟ್ಟಡವೊಂದರಿಂದ ಹಾರಿದ್ದ ಆದರೆ, ಆಯತಪ್ಪಿ ಅಪಾರ್ಟ್ ಮೆಂಟ್ ಒಂದರ ಗೋಡೆಗೆ ಹೊಡೆದು ಅಲ್ಲೇ ಸಿಕ್ಕಿಕೊಂಡ. ಅಗ್ನಿಶಾಮಕ ಸಿಬ್ಬಂದಿ ಬಂದು ರಕ್ಷಣೆ ಮಾಡುವವರೆಗೆ ಆತ ಅಲ್ಲಿಯೇ ನೇತಾಡಿಕೊಂಡಿರಬೇಕಾಯಿತು.
ಈ ಘಟನೆಯನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಘಟನೆಯ ನಂತರ ಕ್ಲೆವರ್ ಲ್ಯಾಂಡ್ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ಭಾನುವಾರ ರಾತ್ರಿ 2 ಗಂಟೆಗೆ ನಾನು ನನ್ನ ನಾಲ್ವರು ಸ್ನೇಹಿತರ ಜತೆ ವಿಮಾನದಿಂದ ಹಾರಿದ್ದೆ ಎಂದು ಹೇಳಿಕೆ ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಆದರೆ, ಆತ ಪಕ್ಕದ ಬಿಲ್ಡಿಂಗ್ ನಿಂದ ಹಾರಿದ್ದನ್ನು ನೋಡಿದವರಿದ್ದಾರೆ.
“ಆತ ಇದೇ ಮೊದಲ ಬಾರಿ ಹಾರಿದ್ದಲ್ಲ. ದುರದೃಷ್ಟವಶಾತ್ ಈ ಬಾರಿ ಆತ ಸಿಕ್ಕಿಹಾಕಿಕೊಂಡಿದ್ದಾನೆ” ಎಂದು ಅಗ್ನಿಶಾಮಕ ಲೆಫ್ಟಿನೆಂಟ್ ಮಿಕೆ ನೋರ್ಮನ್ ಹೇಳಿದ್ದಾರೆ.
https://www.instagram.com/p/CDrCmYWjeG4/?utm_source=ig_embed