ಆನ್‌ಲೈನ್ ಗ್ರಾಹಕರು ಮನೆಬಾಗಿಲಿಗೆ ಉತ್ಪನ್ನ ತರಿಸಿಕೊಂಡು ಬೆಪ್ಪು ಬೀಳುವ ಉದಾಹರಣೆ ಸಾಕಷ್ಟಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆನ್ ಲೈನ್ ಗ್ರಾಹಕ ತಾನು ಬುಕ್ ಮಾಡಿದ ಉತ್ಪನ್ನದ ಜತೆ ಜೀವಂತ ಹುಳುಗಳ ರಾಶಿಯನ್ನೂ ಸ್ವೀಕರಿಸಿ ಬೇಸ್ತು ಬಿದ್ದಿದ್ದಾನೆ.
ನ್ಯೂಯಾರ್ಕ್ ವಾಸಿ ಬೆಂಜಮಿನ್ ಸ್ಮಿಥಿ ಅವರು ತಮಗೆ ಬಂದ ಪಾರ್ಸೆಲ್ ತೆರೆದಾಗ ಜೀವ ಭಯ ಎದುರಿಸಬೇಕಾಯಿತಂತೆ. ಪಾರ್ಸೆಲ್ ಜೊತೆಗೆ ಜೀವಂತ ಹುಳುಗಳು ತೆವಳುತ್ತಿರುವುದನ್ನು ಅವರು ಕಂಡುಕೊಂಡರು.
ಬಳಿಕ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಪ್ಯಾಕೇಜ್ ಭದ್ರವಾಗಿ ಮುಚ್ಚಲಾಗಿತ್ತು, ಮತ್ತು ಹಾನಿಗೊಳಗಾಗಿರಲಿಲ್ಲ. ಹೀಗಾಗಿ ಪ್ರಯಾಣ ಅಥವಾ ವಿತರಣೆ ಸಂದರ್ಭದಲ್ಲಿ ಹುಳು ಬಾಕ್ಸ್ ಒಳಗೆ ಪ್ರವೇಶಿಸಿಲ್ಲ ಎಂದು ಅವರು ಹೇಳಿದ್ದಾರೆ.
ನಂತರ ಸ್ಮಿಥಿ ಅವರು ನೈಕ್ ಎಲೈಟ್ ಗ್ರಾಹಕ ಸೇವಾ ತಂಡದೊಂದಿಗೆ ಮಾತನಾಡಿದ್ದಾರೆ. ಅವರು ತಮ್ಮ ಹಣವನ್ನು ಸಂಪೂರ್ಣವಾಗಿ ಮರುಪಾವತಿಸಲು ಒಪ್ಪಿಕೊಂಡರು ಎಂದು ವಿವರಿಸಿದ್ದಾರೆ.
https://www.facebook.com/BenjaminSmitheePersonal/posts/10104424746304984