alex Certify 4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ ಅಥವಾ ಪುಟ್ಟ ನಿವಾಸವೇ ಆಗಿರಲಿ ಎಲ್ಲರಿಗೂ ಮನೆ ಅಚ್ಚುಕಟ್ಟಾಗಿ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತೆ.

ಆದರೆ ಡೆವಲಪರ್​ನ ಸಣ್ಣ ತಪ್ಪಿನಿಂದಾಗಿ ವ್ಯಕ್ತಿಯೊಬ್ಬನ ಐಷಾರಾಮಿ ಮನೆಯ ಕನಸು ದುಃಸ್ವಪ್ನವಾಗಿ ಬದಲಾಗಿದೆ. ನೇಪಾಳದ ವಿಷ್ಣು ಆರ್ಯಲ್​ ಎಂಬವರು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕನಸಿನ ಮನೆಯನ್ನ ಹೊಂದುವ ಆಸೆ ಇಟ್ಟುಕೊಂಡಿದ್ದರು. ಇದಕ್ಕಾಗಿ ಅವರು ನಾಲ್ಕು ಕೋಟಿ ರೂಪಾಯಿಯನ್ನ ಮೀಸಲಿಟ್ಟಿದ್ದರು.

ಆಸ್ಟ್ರೇಲಿಯಾದಲ್ಲಿ ಹೊಸ ಜೀವನ ಶುರು ಮಾಡಬೇಕು ಎಂದುಕೊಂಡಿದ್ದ ಆರ್ಯಲ್​ ಸಿಡ್ನಿಯಲ್ಲಿ ಈ ಕನಸಿನ ಮನೆಯನ್ನ ಕಟ್ಟಿಸುತ್ತಿದ್ದರು. ಇದಕ್ಕಾಗಿ ಅವರು ಜ್ಯಾಕ್​ ಹೋಮ್ಸ್ ಜೊತೆ 1.85 ಕೋಟಿ ರೂಪಾಯಿಯ ಅಗ್ರಿಮೆಂಟ್​ಗೆ ಸಹಿ ಹಾಕಿದ್ದರು. ಜಾಗಕ್ಕಾಗಿ ಪ್ರತ್ಯೇಕವಾಗಿ 2.2 ಕೋಟಿ ರೂಪಾಯಿ ನೀಡಿದ್ದರು.

ಆದರೆ ಡೆವಲಪರ್​ನ ತಪ್ಪಿನಿಂದಾಗಿ ಅವರೀಗ ಕೇವಲ ಅರ್ಧ ಆಸ್ತಿಯನ್ನ ಮಾತ್ರ ಹೊಂದುವಂತಾಗಿದೆ. ಬಿಲ್ಡರ್​ನ ಗೊಂದಲದಿಂದಾಗಿ ವಿಶಾಲ ಮನೆಯನ್ನ ಹೊಂದುವ ಕನಸು ದುಃಸ್ವಪ್ನವಾಗಿ ಬದಲಾಗಿದೆ. ಇದೀಗ ಅವರ ಬಳಿ ಕೇವಲ ಅರ್ಧ ಮನೆ ಇದ್ದು ಇದು ನೋಡೋಕೆ ಬಹಳ ವಿಚಿತ್ರವಾಗಿ ಕಾಣ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...