alex Certify ಹೀಗೊಂದು ಮ್ಯಾರೇಜ್ ಸ್ಟೋರಿ: ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ಮ್ಯಾರೇಜ್ ಸ್ಟೋರಿ: ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ ವೈದ್ಯ

ಬ್ರೆಸಿಲಿಯಾ: ವಿವಾಹಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದ್ದವು…. ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದವು… ಆದರೆ ಮದುವೆಯಾಗಬೇಕಿದ್ದ ಹುಡುಗಿಯೊಂದಿಗಿನ ಮನಸ್ತಾಪದಿಂದಾಗಿ ಕೊನೆ ಘಳಿಗೆಯಲ್ಲಿ ಹುಡುಗಿ ಕೈಕೊಟ್ಟುಬಿಟ್ಟಿದ್ದಾಳೆ. ಆದರೂ ಮದುವೆ ನಿಲ್ಲಿಸದ ಯುವಕ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ್ದಾನೆ.

ಹೌದು. ಬ್ರೆಜಿಲ್ ನ ಇಟಾಕೆರ್ ನ ಬಾಹಿಯಾದಲ್ಲಿ ಈ ವಿಚಿತ್ರ ಮದುವೆ ನಡೆದಿದೆ. ವೃತ್ತಿಯಲ್ಲಿ ವೈದ್ಯನಾಗಿರುವ ಡಿಯಾಗೊ ರಬೆಲ್ ಹಾಗೂ ವಿಟರ್ ಬ್ಯಾನೊ 2019ರ ನೆವೆಂಬರ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಈ ಬಾರಿ ಅಕ್ಟೋಬರ್ ನಲ್ಲಿ ವಿವಾಹಕ್ಕೆ ಸಿದ್ಧತೆಯನ್ನೂ ನಡೆಸಿದ್ದರು. ಇನ್ನೇನು ಮದುವೆ ಹತ್ತಿರವಾಗುತ್ತಿದೆ ಎನ್ನುವಾಗ ಡಿಯಾಗೊ ಹಾಗೂ ವಿಟರ್ ನಡುವೆ ಜಗಳ, ಮನಸ್ತಾಪ ಆರಂಭವಾಗಿದೆ. ಇದರಿಂದ ಬೇಸತ್ತ ವಿಟರ್, ಡಿಯಾಗೊನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಮದುವೆ ಮುರಿದುಬಿದ್ದಿದೆ.

ಆದರೂ ವಿಚಲಿತನಾಗದ ಡಿಯಾಗೊ ತನ್ನನ್ನು ತಾನೇ ವಿವಾಹವಾಗಲು ನಿರ್ಧರಿಸಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬದೊಂದಿಗೆ ತನ್ನನ್ನು ತಾನೇ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಬಾಹಿಯಾದ ರೆಸಾರ್ಟ್ ನಲ್ಲಿ ನಡೆದ ಈ ವಿವಾಹ ಸಂಭ್ರಮದ ಕ್ಷಣಗಳನ್ನು ಸ್ವತ: ಡಿಯಾಗೊ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಇದು ತನ್ನ ಅತ್ಯಂತ ಖುಷಿಯಾದ ಸಂದರ್ಭ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...