ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ.
ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್ ಸುದೀರ್ಘಾವಧಿಗೆ ಪೆರಿನಿಯಮ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಸೆಪ್ಸಿಸ್ ಆಗಿ ಪರಿವರ್ತನೆಯಾದ ಕಾರಣ ಆತನ ಬೆರಳುಗಳು, ಹಿಮ್ಮಡಿ ಹಾಗೂ ಮರ್ಮಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭವಾಗಿತ್ತು. ಇದು ಅದೆಷ್ಟರ ಮಟ್ಟಿಗೆ ಗಂಭೀರವಾಯಿತೆಂದರೆ, ಆತನ ಗಂಡಸುತನವೇ ಇಲ್ಲದಂತಾಗುವ ಮಟ್ಟಕ್ಕೆ ಆಗಿಬಿಟ್ಟಿತ್ತು.
ಆರ್ಮ್-ಗ್ರಾಫ್ಟ್ ಕ್ರಿಯೆಯಿಂದ ಕಳೆದುಹೋಗಿದ್ದ ತನ್ನ ಮರ್ಮಾಂಗವನ್ನ ಮಾಲ್ಕಂ ಮರಳಿ ಪಡೆದುಕೊಂಡಿದ್ದಾರೆ. ಮೂತ್ರ ಮಾಡಲೂ ಸಹ ಕಷ್ಟಪಡುತ್ತಿದ್ದ ಮಾಲ್ಕಂಗೆ ಈ ಶಸ್ತ್ರಚಿಕಿತ್ಸೆಗೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ (NHS) 50,000 ಪೌಂಡ್‌ಗಳ ನೆರವು ನೀಡಿದೆ.