ಕಡಲ ತೀರದಲ್ಲಿ ಬಿಸಿಲಿಗೆ ಮೈಯ್ಯೊಡ್ಡಿ ಮಲಗುವ `ಸನ್ ಬಾತ್’ ಅಮೆರಿಕಾ ಹಾಗೂ ಇತರ ಹಲವು ದೇಶದ ಬಹುಜನರ ಬೇಸಿಗೆಯ ವಿಶ್ರಾಂತಿ ಪಡೆಯುವ ವಿಧಾನವಾಗಿದೆ.
ಹಾಗೆ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವ ಅವಧಿ ಹೆಚ್ಚಾಗಬಾರದು. ಹಾಗೇನಾದರೂ ಆದರೆ ಚರ್ಮವೆಲ್ಲ ಸುಟ್ಟು ಬಣ್ಣ ಬದಲಾಗಿ ಹೋಗುತ್ತದೆ.
ಅಮೆರಿಕಾ ಫ್ಲೋರಿಡಾದ ವ್ಯಕ್ತಿಯೊಬ್ಬ ಹೀಗೆ ಬಿಸಿಲಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹೊತ್ತು ಇದ್ದು, ಬೆಂದು ತನ್ನ ಚರ್ಮದ ಬಣ್ಣವನ್ನೇ ಬದಲಿಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಮುದ್ರದಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿಯ ವಿಡಿಯೋವನ್ನು ಡ್ರೋಣ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗಿದೆ. ಆತ ಎಷ್ಟರ ಮಟ್ಟಿಗೆ ಟ್ಯಾನ್ ಆಗಿದ್ದಾನೆ ಎಂದರೆ ಮೈ ಸಂಪೂರ್ಣ ಕೆಂಪಾಗಿ ಹೋಗಿದೆ. ಸಮುದ್ರದಲ್ಲಿರುವ ಸ್ಟಿಂಗ್ರೆ ಮೀನುಗಳು ಯಾವುದೋ ತಿನ್ನುವ ವಸ್ತು ಸಿಕ್ಕಿತು ಎಂದು ಸುತ್ತ ಸುಳಿಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಫುಟೇಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರು ಕೆಂಪು ಚರ್ಮದ ಮನುಷ್ಯನಿಗೆ ವಿವಿಧ ಹೆಸರಿಟ್ಟಿದ್ದಾರೆ. ಹೆಲ್ಲೊ ಮ್ಯಾನ್, ಸ್ಯಾಟನ್, ರೆಡ್ ಲೋಬ್ ಸ್ಟಾರ್ ಹೀಗೆ ವಿವಿಧ ಹೆಸರಿಟ್ಟಿದ್ದಾರೆ.