ಸಾಮಾನ್ಯವಾಗಿ ಯಾವುದೇ ವಸ್ತು ಅಥವಾ ಸೇವೆಯ ಸಂಬಂಧ ಗ್ರಾಹಕ ಸೇವಾ ಪ್ರತಿನಿಧಿಗಳಿಗೆ ಕರೆ ಮಾಡಿದಿರೆಂದರೆ ನಿಮಗೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಿಳಿದ ಮಾರ್ಗಗಳು ಕೆಲಸ ಮಾಡಿಲ್ಲವೆಂದೇ ಅರ್ಥ. ಕೆಲವೊಮ್ಮೆ ಸಪೋರ್ಟ್ ಸಿಬ್ಬಂದಿಗೂ ಸಹ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೇ ಇರಬಹುದು.
ಇದೇ ರೀತಿಯ ಅನುಭವ ಪಡೆದ ಟ್ವಿಟರ್ ಬಳಕೆದಾರರೊಬ್ಬರು, ಖುದ್ದು ತಾವೇ ಸಪೋರ್ಟ್ ಸಿಬ್ಬಂದಿಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ನೆರವಾಗಿದ್ದಾರೆ. ಮೈಕ್ ರೋಸ್ ಹೆಸರಿನ ಈ ವ್ಯಕ್ತಿ ತಮ್ಮ ಜಿಮೇಲ್ ಖಾತೆಯಲ್ಲಿ ’ಅನುಮಾನಾಸ್ಪದ ಚಟುವಟಿಕೆ’ ಕಂಡು ಬಂದ ಕಾರಣ ಲಾಕ್ಡ್‌ಔಟ್ ಆಗಿದ್ದರು. ಈ ಸಮಸ್ಯೆ ಬಗೆಹರಿಸಿಕೊಳ್ಳಲೆಂದು ಗೂಗಲ್‌ನ ಗ್ರಾಹಕ ಸೇವಾ ಪ್ರತಿನಿಧಿಗೆ ಕರೆ ಮಾಡಿದ ಮೈಕ್‌ಗೆ ಈ ಖಾತೆ ವೈಯಕ್ತಿಕವಾದದ್ದಾದ ಕಾರಣ ಏನೂ ಮಾಡಲು ಸಾಧ್ಯವಿಲ್ಲವೆಂದು ಪ್ರತಿನಿಧಿಯಿಂದ ಉತ್ತರ ಬಂದಿದೆ.
ಲಾಕ್ ಡೌನ್ ಅವಧಿಯಲ್ಲಿ ಯಾವೆಲ್ಲಾ ಕೈಗಾರಿಕೆಗಳಿಗೆ ಅನುಮತಿ…? ಇಲ್ಲಿದೆ ಮಾಹಿತಿ
ಈ ಕುರಿತಂತೆ ಗೂಗಲ್ ಫೋರಂಗೆ ಸಂಪರ್ಕಿಸಲು ಪ್ರತಿನಿಧಿಯಿಂದ ಬಂದ ಸಲಹೆ ಮೈಕ್‌ಗೆ ಸರಿ ಕಾಣಲಿಲ್ಲ. ಅಲ್ಲದೇ, ಇಂಥದ್ದೇ ಕಾರಣದಿಂದ ಖುದ್ದು ತನ್ನ ಖಾತೆಯೂ ಲಾಕ್ಡ್‌ಔಟ್ ಆಗಿದೆಯೆಂದು ಪ್ರತಿನಿಧಿ ಡೇನಿಯಲ್ ತಿಳಿಸಿದ್ದರು. ಆಗ ಈ ಸಮಸ್ಯೆಗೆ ತಮ್ಮ ಬಳಿ ಪರಿಹಾರವಿದೆ ಎಂದ ಮೈಕ್, ಈ ಬಗ್ಗೆ ಏನು ಮಾಡಬೇಕೆಂದು ಆತನಿಗೆ ತಿಳಿಸಿ ಖುದ್ದು ತನ್ನ ಹಾಗೂ ಪ್ರತಿನಿಧಿಯ ಗೂಗಲ್ ಖಾತೆಗಳನ್ನು ಅನ್‌ಬ್ಲಾಕ್ ಮಾಡುವಲ್ಲಿ ಸಫಲರಾಗಿದ್ದಾರೆ.
https://twitter.com/RaveofRavendale/status/1389507928269393921?ref_src=twsrc%5Etfw%7Ctwcamp%5Etweetembed%7Ctwterm%5E1389507928269393921%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fman-locked-out-of-gmail-account-ends-up-helping-google-support-staff-member-unblock-his-id%2F754540