ಲಾಂಕ್ಷೇರ್: ಕೊರೋನಾ ವೈರಸ್ ಪರಿಣಾಮ ಸಲೂನ್ ಗಳನ್ನು ಹಲವು ತಿಂಗಳುಗಳಿಂದ ಬಂದ್ ಮಾಡಿಸಲಾಗಿದೆ. ಹಲವು ದೇಶಗಳಲ್ಲಿ ಕಟ್ಟಿಂಗ್ ಶಾಪ್ ತೆರೆಯುವುದು ಇನ್ನೂ ಅಪರಾಧವಾಗಿದೆ.
ವಾಯವ್ಯ ಇಂಗ್ಲೆಂಡ್ ನಲ್ಲಿರುವ ದೇಶ ಲಾಂಕ್ಷೇರ್ ನಲ್ಲಿ ನಿಯಮ ಮೀರಿ ತೆರೆದ ಕಟ್ಟಿಂಗ್ ಶಾಪ್ ಅನ್ನು ಪೊಲೀಸರು ತೆರಳಿ ಬಂದ್ ಮಾಡಿಸಿದ ಘಟನೆ ನಡೆದಿದೆ.
ಪೆಟ್ರೋಲಿಂಗ್ ನಲ್ಲಿದ್ದ ಪೊಲೀಸರು ಕಟ್ಟಿಂಗ್ ಶಾಪ್ ತೆರೆದಿರುವುದನ್ನು ಗುರುತಿಸಿ ಅಲ್ಲಿಗೆ ನುಗ್ಗುತ್ತಾರೆ. “ಇಲ್ಲಿ ಸಾಮಾಜಿಕ ಅಂತರ ಎಲ್ಲಿದೆ..?ಏನು ನಡೆಯುತ್ತಿದೆ ಇಲ್ಲಿ….” ಎಂದು ಗದರಿಸುತ್ತಾರೆ. ಅರೆಬರೆ ತಲೆ ಕ್ಷೌರ ಮಾಡಿಸಿಕೊಂಡವನಿಗೆ ಪೂರ್ಣಗೊಳಿಸಲೂ ಬಿಡದೇ ಶಾಪ್ ಬಂದ್ ಮಾಡುತ್ತಾರೆ. ಇದರಿಂದ ವ್ಯಕ್ತಿಯೊಬ್ಬ ಅರೆಬರೆ ತಲೆ ಕ್ಷೌರ ಮಾಡಿಕೊಂಡೇ ತೆರಳಬೇಕಾಗುತ್ತದೆ. ಅದರ ವಿಡಿಯೋವನ್ನು ಸ್ಥಳೀಯ ಟಿವಿ ಚಾನಲ್ ವೊಂದು ವರದಿ ಮಾಡಿದೆ.