ಜನಸಂದಣಿ ಇರುವ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಓಡಿಹೋಗಿ ಕಿಟಕಿಯ ಮೂಲಕ ಕಾರಿನೊಳಗೆ ಧುಮುಕಿ ಚಾಲಕನನ್ನು ಒತ್ತಾಯಪೂರ್ವಕವಾಗಿ ಬೇಕಾಬಿಟ್ಟಿ ಕಾರು ಚಲಾಯಿಸುವುದನ್ನು ನಿಲ್ಲಿಸುವಲ್ಲಿ ಸಫಲವಾಗುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ.
ಅಲ್ಬೇನಿಯಾದ ರಾಜಧಾನಿಯಲ್ಲಿ ಜನ ಸಂದಣಿ ಇರುವ ಪ್ರದೇಶದಲ್ಲಿ ಕಾರು ಚಾಲಕನೊಬ್ಬ ಅಜಾಗರೂಕತೆಯಿಂದ ಕಾರು ಚಲಾಯಿಸಿ ಅಲ್ಲಿದ್ದವರನ್ನು ಭಯಭೀತಗೊಳಿಸುತ್ತಾನೆ. ಇದೇ ವೇಳೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಕ್ಷಣ ಅಪಾಯ ತಪ್ಪಿಸುವುದನ್ನು ಆ ವಿಡಿಯೋದಲ್ಲಿ ನೋಡಬಹುದಾಗಿದೆ.
ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಕೊರೋನಾ ನಕಲಿ ಔಷಧಿ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ
ಆರಂಭದಲ್ಲಿ ಅಲ್ಲಿದ್ದ ಜನರ ಗುಂಪು ಕಾರು ಚಾಲಕನನ್ನು ವಾಹನದಿಂದ ಹೊರಗೆಳೆಯಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗುವುದಿಲ್ಲ. ಕಾರು ಚಾಲಕ ಉಡಾಫೆಯಿಂದ ಕಾರು ಓಡಿಸುವುದನ್ನು ಮುಂದುವರಿಸುತ್ತಾನೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯು ಓಡಿಬಂದು ತೆರೆದ ಬದಿಯ ಕಿಟಕಿಯ ಮೂಲಕ ಕಾರಿನೊಳಗೆ ಸಾಹಸಮಯವಾಗಿ ಧುಮುಕಿ ಚಾಲಕನು ಕಾರನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಾನೆ.