ಜೀಜಿಂಗ್: ಎರಡು, ಮೂರು ಪಿಂಟ್ ಬಿಯರ್ ಕುಡಿದರೇ ಸಾಕಷ್ಟು ಬಾರಿ ಶೌಚಗೃಹಕ್ಕೆ ಹೋಗುವುದು ಸಾಮಾನ್ಯ.
ಆದರೆ ಇಲ್ಲೊಬ್ಬ ಬರೋಬ್ಬರಿ 10 ಬಿಯರ್ ಕುಡಿದು, 18 ತಾಸು ಮಲಗಿ ಮೂತ್ರಕಟ್ಟಿ ತೊಂದರೆಗೀಡಾಗಿದ್ದಾನೆ. ಇದರಿಂದ ಚೀನಾ ಜೇಜಿಂಗ್ ಪ್ರಾಂತ್ಯದ ಜೂಜಿಯ 40 ವರ್ಷದ ಹು ಮೂತ್ರ ಕೋಶಕ್ಕೆ ಹಾನಿಯಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಅವನ ಜೀವ ಉಳಿಸಿದ್ದಾರೆ.
ಸಾಮಾನ್ಯವಾಗಿ ಮೂತ್ರ ಕೋಶ 3.5 ಲೀಟರ್ ನಿಂದ 5 ಲೀಟರ್ ವರೆಗೆ ಹಿಗ್ಗುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ, ಅದಕ್ಕಿಂತ ಹೆಚ್ಚು ಪದಾರ್ಥ ಸೇವಿಸಿ ಜಾಸ್ತಿ ಹೊತ್ತು ಮೂತ್ರ ಮಾಡದೇ ಇರುವುದರಿಂದ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಹು ಅವರಿಗೆ ತೀವ್ರ ಸ್ವರೂಪದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಜಿಂಗ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.