
ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ ಕಾರಣವೊಂದಿದೆ. ಮನೆಯಲ್ಲಿ ಹಲಗೆಯನ್ನ ಇಡಲು ಹೋದ ವ್ಯಕ್ತಿ ಅದೇ ಹಲಗೆಯಿಂದ ತಲೆಯನ್ನ ಜಪ್ಪಿಸಿಕೊಂಡಿದ್ದಾನೆ. ಈ ವಿಡಿಯೋವನ್ನ ಸ್ವತಃ ಆತನ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಿಮ್ಮ ಪತಿಯ ಕೈಯಲ್ಲಿ ಆಗದ ಕೆಲಸವನ್ನ ಮಾಡಲು ಹೋದರೆ…….ಎಂಬ ಶೀರ್ಷಿಕೆಯನ್ನ ನೀಡಿ ಪತ್ನಿ ಈ ವಿಡಿಯೋವನ್ನ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನ ಮೊದಲು ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿದ್ದು ಬಳಿಕ ಟ್ವಿಟರ್ನಲ್ಲಿ ಅಮೆರಿಕದ ಬಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮ್ಯಾನ್ ಪೋಸ್ಟ್ ಮಾಡಿದ್ದಾರೆ. ಕಾರ್ಟೂನ್ನಂತೆ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.