ಲಂಡನ್: ಮತ್ತು ಬರುವ ಸಲುವಾಗಿ ಜನ ಭಿನ್ನ ವಿಭಿನ್ನ ಮದ್ಯ ಸೇವಿಸುವುದು ನೋಡಿದ್ದೇವೆ. ಆದರೆ, ಇವರಿಗೆ ಮದ್ಯ ಕುಡಿಯದೆಯೂ ಮತ್ತು ಬರುತ್ತದೆ. ಆದರೆ, ಖುಷಿ ಪಡುವ ವಿಚಾರವಲ್ಲ. ಅದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ.
ಯುನೈಟೆಡ್ ಕಿಂಗ್ಡಮ್ ನ ಸಫೋಕ್ ನ ಲೋವೆಸ್ಟೋಫೆಟ್ ಎಂಬಲ್ಲಿನ 62 ವರ್ಷದ ನಿಕ್ ಕಾರ್ ಸನ್ ಎಂಬುವವರಿಗೆ ಅಟೊ ಬೆವರಿ ಸಿಂಡ್ರೋಮ್ (ಎಬಿಸಿ) ಎಂಬ ರೋಗವಿದೆ. ಅವರು ಕೇಕ್ ತಿಂದರೆ ಸಾಕು ಫುಲ್ ಟೈಟ್ ಆಗುತ್ತಾರೆ.
ಸುಮಾರು 20 ವರ್ಷ ರಾಸಾಯನಿಕ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದಕ್ಕೆ ಅವರಿಗೆ ಈ ಕಾಯಿಲೆ ಬಂದಿದೆ. 2003 ರಲ್ಲಿ ಕಾರ್ ಸನ್ ಅವರಿಗೆ ಈ ಕಾಯಿಲೆ ಇರುವುದು ಅನುಭವಕ್ಕೆ ಬಂತು. ಅದಕ್ಕೂ ಮೊದಲು ಅವರು ಮದ್ಯ ಸೇವಿಸದೆಯೂ ಮೂರು ಬಾರಿ ಮಿತಿ ಮೀರಿ ಕಾರು ಚಲಾಯಿಸಿ ಪೊಲೀಸರ ಅತಿಥಿಯಾಗಿದ್ದರು.
ಅವರ ಪತ್ನಿ ಕರೆನ್ ಅವರು ಮೊದಲು ಈ ರೋಗದ ಬಗ್ಗೆ ತಿಳಿದುಕೊಂಡರು. ಕಾರ್ ಸನ್ ಅವರು ಸಕ್ಕರೆ ಹಾಗೂ ಕಾರ್ಬೊ ಹೈಡ್ರೇಟ್ ನ ಯಾವುದೇ ಅಂಶ ಸೇವಿಸಿದರೂ ಅವರ ಹೊಟ್ಟೆಯಲ್ಲೇ ಆಲ್ಕೋ ಹಾಲ್ ಉತ್ಪತ್ತಿಯಾಗುತ್ತದೆ.